ಹೈದರಾಬಾದ್‌[ಸೆ.21]: ದಸರಾ ಹಬ್ಬದ ಕೊಡುಗೆಯಾಗಿ ಸರ್ಕಾರಿ ಸ್ವಾಮ್ಯದ ಸಿಂಗರೇಣಿ ಕಲ್ಲಿದ್ದಲು ಕಂಪನಿ ನಿಗಮದ (ಎಸ್‌ಸಿಸಿಎಲ್‌) ನೌಕರರಿಗೆ ತಲಾ 1.01 ಲಕ್ಷ ರು. ಬೋನಸ್‌ ನೀಡುವುದಾಗಿ ತೆಲಂಗಾಣ ಸರ್ಕಾರ ಹೇಳಿದೆ.

ಸತತ 6ನೇ ವರ್ಷವೂ 11 ಲಕ್ಷ ರೈಲ್ವೆ ನೌಕರರಿಗೆ 78 ದಿನಗಳ ಬೋನಸ್‌!

ಈ ಬಗ್ಗೆ ವಿಧಾನಸಭೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್‌ ಘೋಷಣೆ ಮಾಡಿದ್ದು, ಎಸ್‌ಸಿಸಿಎಲ್‌ ನೌಕರರು ದೇಶದ ಸಂಪತ್ತು ವೃದ್ಧಿಗೆ ಗಡಿಯಲ್ಲಿರುವ ಸೈನಿಕರಂತೆ ತಮ್ಮ ಜೀವ ಪಣಕ್ಕಿಟ್ಟು ದುಡಿಯುತ್ತಿದ್ದಾರೆ. ಕಂಪನಿ ಈ ಬಾರಿ ದಾಖಲೆಯ 1765 ಕೋಟಿ ರು. ಲಾಭ ಗಳಿಸಿಕೊಂಡಿದೆ. ಹೀಗಾಗಿ ಹಾಗಾಗಿ ಅವರಿಗೆ ದಸರಾ ಕೊಡುಗೆಯಾಗಿ ತಲಾ 1,00,899ರು. ಬೋನಸ್‌ ವಿತರಿಸಲಾಗುತ್ತದೆ. ಇದರಿಂದ 48 ಸಾವಿರ ಉದ್ಯೋಗಿಗಳಿಗೆ ನೆರವಾಗಲಿದೆ ಎಂದು ತಿಳಿಸಿದ್ದಾರೆ.

ಬೋನಸ್ ಎಷ್ಟು ಕೊಡ್ತಿವಿ ಅಂತಾ ತೋರಿಸಲು ಹಣದ ಬೆಟ್ಟ ಕಟ್ಟಿದ ಕಂಪನಿ!

ಪ್ರತೀ ವರ್ಷ ಎಸ್‌ಸಿಸಿಎಲ್‌ ಉದ್ಯೋಗಿಗಳಿಗೆ ನೀಡಲಾಗುವ ಬೋನಸ್‌ನಲ್ಲಿ ಏರಿಕೆಯಾಗುತ್ತಿದ್ದು, 2013-14 ರಲ್ಲಿ ಅವಿಭಜಿತ ಆಂಧ್ರ ಪ್ರದೇಶದ ಇರುವಾಗ 13,540ರು . ಬೋನಸ್‌ ನೀಡಲಾಗಿತ್ತು. ತೆಲಂಗಾಣ ಪ್ರತ್ಯೇಕ ರಾಜ್ಯವಾದ ಬಳಿಕ ಬೋನಸ್‌ ಪ್ರಮಾಣ ಹೆಚ್ಚಳವಾಗಿದ್ದು, 2017-18ರಲ್ಲಿ ಶೇ. 27ರಷ್ಟುಲಾಭ ಗಳಿಸಿದ್ದರಿಂದ ತಲಾ 60,369ರು. ಬೋನಸ್‌ ಘೋಷಣೆ ಮಾಡಲಾಗಿತ್ತು. ಅಲ್ಲದೇ ಈ ಬಾರಿ ಕಂಪನಿ ದಾಖಲೆಯ 1725 ಕೋಟಿ ರು. ಲಾಭ ಗಳಿಸಿದೆ.