ಬಿಜೆಪಿ ಶಾಸಕರೋರ್ವರು ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಬಿಜೆಪಿ ರಾಜ್ಯಾಧ್ಯಕ್ಷರಿಗೆ ರವಾನೆ ಮಾಡಿದ್ದಾರೆ.
ತೆಲಂಗಾಣ: ಗೋ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ತಮ್ಮ ಪಕ್ಷದಿಂದ ಗೋ ಹತ್ಯೆಯನ್ನು ತಡೆಯಲು ಯಾವುದೇ ರೀತಿಯ ಬೆಂಬಲ ನೀಡುತ್ತಿಲ್ಲ ಎನ್ನುವ ಕಾರಣದಿಂದ ತೆಲಂಗಾಣ ಬಿಜೆಪಿ ಶಾಸಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಗೋಶ್ ಮಹಲ್ ಕ್ಷೇತ್ರದ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಲೋದ್ ಅವರು ಪಕ್ಷದಿಂದ ಈ ನಿಟ್ಟಿನಲ್ಲಿ ತಮಗೆ ಯಾವುದೇ ಸಗಕಾರ ದೊರೆಯುತ್ತಿಲ್ಲ. ಮುಂದಿನ ಈದ್ ಉಲ್ ಅಝ್ಹಾ ದಂದು ನಡೆಯುವ ಗೋವುಗಳ ಹತ್ಯೆಯನ್ನು ತಡೆಯುವುದು ಇದರಿಂದ ಆಗುತ್ತಿಲ್ಲ. ಆದ್ದರಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ನಿಟ್ಟಿನಲ್ಲಿ ವಿಡಿಯೋ ಮೆಸೇಜ್ ಒಂದನ್ನು ಪೋಸ್ಟ್ ಮಾಡಿದ ರಾಜಾ ಅವರು ತೆಲಂಗಾಣ ಬಿಜೆಪಿ ಅಧ್ಯಕ್ಷ ಕೆ. ಲಕ್ಷ್ಮಣ್ ಅವರಿಗೆ ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾಗಿ ಹೇಳಿದ್ದಾರೆ.
ತಮ್ಮ ಪ್ರಕಾರ ಹಿಂದೂ ಧರ್ಮದಲ್ಲಿ ಗೋವು ರಕ್ಷಣೆ ಎನ್ನುವುದು ಅತ್ಯಂತ ಪ್ರಮುಖವಾದ ವಿಚಾರವಾಗಿದೆ. ನಂತರ ರಾಜಕೀಯ. ಆದರೆ ಇಲ್ಲಿದ್ದು ನನಗೆ ಗೋವುಗಳ ರಕ್ಷಣೆ ಮಾಡಲಾಗುತ್ತಿಲ್ಲ ಆದ್ದರಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
