Asianet Suvarna News Asianet Suvarna News

ಬಾಲಕಿ ಎದುರು ಎಲೆಕ್ಷನ್ ಸೋತಿದ್ದಕ್ಕೆ 13ರ ಬಾಲಕ ಆತ್ಮಹತ್ಯೆ!

ಹುಡುಗಿ ಜತೆ ಸ್ಪರ್ಧೆ​ಯಲ್ಲಿ ಸೋತೆ ಎಂದು ಲೇವಡಿ | ಚುನಾ​ವ​ಣೇಲಿ ಹುಡುಗಿ ಎದು​ರು ಸೋತಿದ್ದಕ್ಕೆ 13ರ ಬಾಲಕ ಆತ್ಮ​ಹ​ತ್ಯೆಗೆ ಶರಣು| 

Telangana 13 year old boy commits suicide after losing Class leader election
Author
Bangalore, First Published Jul 20, 2019, 9:19 AM IST
  • Facebook
  • Twitter
  • Whatsapp

ನಲ್ಗೊಂಡ[ಜು.20]: ಶಾಲಾ ಚುನಾವಣೆಯಲ್ಲಿ ಬಾಲಕಿ ಎದುರು ಸೋತಿದ್ದಕ್ಕೆ ಕೇಳಿಬಂದ ಲೇವಡಿಗೆ ಮನನೊಂದ 8ನೇ ತರಗತಿ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಕರುಣಾಜನ, ಆಘಾತಕಾರಿ ಘಟನೆ ಆಂಧ್ರಪ್ರದೇಶದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.

ಇಂದಿನ ಮಕ್ಕಳೇ ನಾಳಿನ ನಾಯ​ಕರು ಎಂಬ ಗುರಿ​ಯೊಂದಿಗೆ, ರಾಜ​ಕೀ​ಯದ ತಂತ್ರ​ಗ​ಳನ್ನು ಶಾಲಾ ಹಂತ​ದಲ್ಲೇ ತಿಳಿ​ಸಿ​ಕೊ​ಡುವ ನಿಟ್ಟಿ​ನಲ್ಲಿ ಶಾಲೆ​ಯಲ್ಲಿ ವಿದ್ಯಾರ್ಥಿ ನಾಯ​ಕ ಆಯ್ಕೆ​ಗಾಗಿ ಚುನಾವಣೆ ನಡೆಸಲಾಗಿತ್ತು. ಕಳೆದ ಜೂನ್‌ ತಿಂಗಳಲ್ಲಿ ನಡೆದ ಚುನಾವಣೆ ಫಲಿತಾಂಶವನ್ನು 3 ದಿನಗಳ ಹಿಂದೆ ಪ್ರಕಟಿಸಲಾಗಿತ್ತು. ಅದರಲ್ಲಿ ಬಾಲಕಿಯೊಬ್ಬಳು ವಿಜೇತಳಾಗಿದ್ದಳು. ಚುನಾವಣೆಗೆ ಸ್ಪರ್ಧಿಸಿದ್ದ 13 ವರ್ಷದ ಹಿಮಾ​ಚ​ರಣ್‌ 2ನೇ ಸ್ಥಾನಕ್ಕೆ ತೃಪ್ತಿ​ಪ​ಟ್ಟು​ಕೊ​ಳ್ಳು​ವಂತಾ​ಗಿತ್ತು.

ಇದೇ ವಿಚಾ​ರ​ವಾಗಿ ಸ್ನೇಹಿ​ತರು ಹುಡುಗಿ ಜತೆ ಸ್ಪರ್ಧೆ​ಯಲ್ಲಿ ಸೋತೆ ಎಂದು ಲೇವಡಿ ಮಾಡಿ ಕಿಚಾ​ಯಿ​ಸಿ​ದ್ದರು. ಆದರೆ ಇದನ್ನೇ ಗಂಭೀ​ರ​ವಾಗಿ ಸ್ವೀಕ​ರಿ​ಸಿದ್ದ ಹಿಮಾಚರ​ಣ್‌ ಗುರು​ವಾರ ಶಾಲೆ ಮುಗಿದ ನಂತರ ಮನೆಗೆ ಹಿಂದಿ​ರುಗಿ ಶಾಲೆ ಬ್ಯಾಗ್‌ ಇಟ್ಟು ರೈಲು ಹಳಿಯತ್ತ ತೆರಳಿ ಹಳಿಗೆ ಬಿದ್ದು ಆತ್ಮ​ಹತ್ಯೆ ಮಾಡಿ​ಕೊಂಡಿ​ದ್ದಾನೆ.

Follow Us:
Download App:
  • android
  • ios