ಭಾರತ- ಶ್ರೀಲಂಕಾ ನಡುವೆ ವಿಶಾಖಪಟ್ಟಣದಲ್ಲಿ ಇಂದು ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್'ಗಳ ಭರ್ಜರಿ ಜಯ ಗಳಿಸಿದೆ.  

ಬೆಂಗಳೂರು (ಡಿ.17):  ಭಾರತ- ಶ್ರೀಲಂಕಾ ನಡುವೆ ವಿಶಾಖಪಟ್ಟಣದಲ್ಲಿ ಇಂದು ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್'ಗಳ ಭರ್ಜರಿ ಜಯ ಗಳಿಸಿದೆ.

ಟೀಂ ಇಂಡಿಯಾ ಪರ ಶಿಖರ್​​​ ಧವನ್​ ಭರ್ಜರಿ ಶತಕ ಗಳಿಸಿದ್ದಾರೆ. ಶಿಖರ್ ಧವನ್ 12ನೇ ಏಕದಿನ ಶತಕ ದಾಖಲಿಸಿದ್ದಾರೆ. ​ಶ್ರೇಯಸ್​ ಅಯ್ಯರ್​​ 65 ರನ್​​ ಗಳಿಸಿದರೆ, ಶಿಖರ್ ಧವನ್​ ಹಾಗೂ ದಿನೇಶ್​​ ಕಾರ್ತಿಕ್​​ ಅಜೇಯರಾಗಿದ್ದಾರೆ. ​

3 ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 2-1 ರಲ್ಲಿ ಸರಣಿ ಗೆದ್ದುಕೊಂಡಿದೆ.