ಶಿಕ್ಷಕ ದಯಾನಂದಮೂರ್ತಿ ಇಂತಹ ವಿಕೃತ ಕೆಲಸ ಮಾಡಿದವನು. ವಡ್ಡರಕುಪ್ಪೆ ಶಾಲೆಯಲ್ಲಿ 12 ಬಾಲಕಿಯರು ಮತ್ತು 8 ಬಾಲಕರು ಸೇರಿ 20 ಮಕ್ಕಳಿ ದ್ದಾರೆ. ಎರಡು ವರ್ಷಗಳ ಹಿಂದೆ ಶಾಲೆಗೆ ವರ್ಗವಾಗಿ ಬಂದ ಶಿಕ್ಷಕ ದಯಾನಂದಮೂರ್ತಿ ಕೆಲ ದಿನಗಳಲ್ಲೆ ಗ್ರಾಮಸ್ಥರ ವಿಶ್ವಾಸ ಗಳಿಸಿ ಕೊಂಡಿದ್ದ.

ಕುಣಿಗಲ್ (ನ.22): ಶಿಕ್ಷಕನೊಬ್ಬ ಕೆಲವು ತಿಂಗಳಿನಿಂದ ಶಾಲಾ ಬಾಲಕಿಯರಿಗೆ ಮೊಬೈಲ್‌'ನಲ್ಲಿ ಅಶ್ಲೀಲ ಚಿತ್ರ, ವಿಡಿಯೋ ತೋರಿಸಿ ಲೈಂಗಿಂಕ ಕಿರುಕುಳ ನೀಡುತ್ತಿದ್ದ ವಿಚಾರ ಬಹಿರಂಗಗೊಂಡಿದ್ದು, ಈ ಸಂಬಂಧ ಮಕ್ಕಳ ಪೋಷಕರು ಮತ್ತು ಗ್ರಾಮಸ್ಥರು ಶಿಕ್ಷಕನಿಗೆ ಧರ್ಮದೇಟು ನೀಡಿದ ಘಟನೆ ಮಂಗಳವಾರ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕೊತ್ತಗೆರೆ ಹೋಬಳಿಯ ವಡ್ಡರಕುಪ್ಪೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಶಿಕ್ಷಕ ದಯಾನಂದಮೂರ್ತಿ ಇಂತಹ ವಿಕೃತ ಕೆಲಸ ಮಾಡಿದವನು. ವಡ್ಡರಕುಪ್ಪೆ ಶಾಲೆಯಲ್ಲಿ 12 ಬಾಲಕಿಯರು ಮತ್ತು 8 ಬಾಲಕರು ಸೇರಿ 20 ಮಕ್ಕಳಿ ದ್ದಾರೆ. ಎರಡು ವರ್ಷಗಳ ಹಿಂದೆ ಶಾಲೆಗೆ ವರ್ಗವಾಗಿ ಬಂದ ಶಿಕ್ಷಕ ದಯಾನಂದಮೂರ್ತಿ ಕೆಲ ದಿನಗಳಲ್ಲೆ ಗ್ರಾಮಸ್ಥರ ವಿಶ್ವಾಸ ಗಳಿಸಿ ಕೊಂಡಿದ್ದ.

ವಿಷಯ ಬಹಿರಂಗಗೊಂಡಿದ್ದು ಹೇಗೆ?: ಬಾಲಕಿಯರು ತಾವು ಅನುಭವಿಸುತ್ತಿದ್ದ ನೋವನ್ನು ಸಹಪಾಠಿ ಹೇಮಂತ ಎಂಬಾತನ ಬಳಿ ತೋಡಿಕೊಂಡಾಗ, ಐದನೇ ತರಗತಿ ವ್ಯಾಸಂಗ ಮಾಡುವ ಬಾಲಕ ಶಾಲೆಯಲ್ಲಿ ನೀಡಿದ್ದ ಮಕ್ಕಳ ಕಾರ್ಡ್‌'ನಲ್ಲಿದ್ದ ಪೊಲೀಸ್ ಸಹಾಯವಾಣಿ ನಂಬರನ್ನು ಬಾಲಕಿಯರಿಗೆ ನೀಡಿ, ನೀವು ಕರೆಮಾಡಿ ನಿಮ್ಮ ಸಹಾಯಕ್ಕೆ ಪೊಲೀಸ್ ಅಂಕಲ್ ಬರುತ್ತಾರೆ ಎಂದು ಹೇಳಿದ್ದಲ್ಲದೆ ಈ ನಂಬರ್ ಉಚಿತ ಎಂದು ಸಹ ವಿವರಿಸಿದ್ದ.

ಇದರಂತೆ ಮಂಗಳವಾರ ಬೆಳಗ್ಗೆ ಬಾಲಕಿಯರು ಗ್ರಾಮಸ್ಥರೊಬ್ಬರ ಮೊಬೈಲ್‌'ನಿಂದ 100 ಕ್ಕೆ ಕರೆ ಮಾಡಿ ತಮಗಾಗುತ್ತಿರುವ ನೋವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಮಕ್ಕಳು ಪೊಲೀಸ್ ಸಹಾಯ ವಾಣಿಗೆ ಕರೆ ಮಾಡುತ್ತಿರುವುದನ್ನು ಕೇಳಿಸಿಕೊಂಡ ಗ್ರಾಮಸ್ಥರು ಮಕ್ಕಳನ್ನು ವಿಚಾರಿಸಿದಾಗ, ಶಿಕ್ಷಕ ಪಾಠ ಮಾಡುವ ಅವಧಿಯಲ್ಲಿ ನಮ್ಮನ್ನು ಕರೆದು ಅಶ್ಲೀಲ ವಿಡಿಯೋ ತೋರಿಸಿ, ನಿಮಗೆ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತೇನೆ. ತಿಂಡಿ ಕೊಡಿಸುತ್ತೇನೆ

ನಾನು ಹೇಳಿದಂತೆ ಕೇಳಬೇಕು. ನಾನು ಕೊಟ್ಟ ಹೂವನ್ನೇ ನಾಳೆ ಮುಡಿದು ಬರಬೇಕು ಇಲ್ಲವಾದರೆ ನಿಮಗೆ ಸರಿಯಾಗಿ ಬುದ್ಧಿ ಕಲಿಸುತ್ತೇನೆ. ಒಂದುವೇಳೆ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿಮ್ಮ ಮೇಲೆ ಜೆಸಿಬಿ ಹರಿಸಿ, ಗುಂಡಿ ತೆಗೆದು ಮುಚ್ಚಿಬಿಡುತ್ತೇನೆ ಹುಷಾರ್ ಎಂದು ಹೆದರಿಸುತ್ತಾರೆ. ಅದಕ್ಕೆ ನಾವು ಯಾರಿಗೂ ಹೇಳಿಲ್ಲ ಭಯವಾಗುತ್ತಿದೆ ಎಂದು ಅಳಲು ತೋಡಿಕೊಂಡರು. ನಂತರ ಈ ವಿಷಯ ಮಕ್ಕಳ ಪೋಷಕರಿಗೂ ತಿಳಿದು ಮಂಗಳವಾರ ಶಾಲೆಗೆ ಮುತ್ತಿಗೆ ಹಾಕಿ ಶಿಕ್ಷಕನನ್ನು ಪ್ರಶ್ನಿಸಿದಾಗ ತಾನು ತಪ್ಪು ಮಾಡಿಲ್ಲ ಎಂದು ಜಾರಿಕೊಳ್ಳಲು ಯತ್ನಿಸಿದ. ಈ ವೇಳೆ ಮಕ್ಕಳು ಶಿಕ್ಷಕನ ವಕೃತಿಯನ್ನು ವಿವರಿಸಿ ಇವನು ಬೇಡ, ಕೆಟ್ಟವನು ಎಂದು ಅಳತೋಡಗಿದರು.

ಇದ ರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಶಿಕ್ಷಕನಿಗೆ ಧರ್ಮದೇಟು ನೀಡಿ, ಶಾಲೆಯೊಳಗೆ ಕೂರಿಸಿದರು. ಶಾಲೆಯೊಳಗೆ ನುಗ್ಗಿದ ಪೋಷಕರು ಶಿಕ್ಷನಿಗೆ ಥಳಿಸಿದರು. ಸ್ಥಳಕ್ಕಾಗಮಿಸಿ ಬಿಇಒ ಸೋಮಶೇಖರ್, ಅಕ್ಷರ ದಾಸೋಹ ಯೋಜನಾಧಿಕಾರಿ ಕೃಷ್ಣ ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡರು. ಪೊಲೀಸ್ ಸಹಾಯವಾಣಿಗೆ ಬಂದ ದೂರಿನ ಹಿನ್ನೆಲೆಯಲ್ಲಿ ಪಿಎಸೈ ಪುಟ್ಟೇಗೌಡ ಸಿಬ್ಬಂದಿ ಶಾಲೆಗೆ ಆಗಮಿಸಿ ಶಿಕ್ಷಕನನ್ನು ವಶಕ್ಕೆ ಪಡೆದು, ಕುಣಿಗಲ್ ಠಾಣೆಗೆ ಕರೆತಂದರು. ಬಾಲಕಿಯ ತಾಯಿಯೊಬ್ಬರು ನೀಡಿದ ದೂರಿನ ಮೇರೆಗೆ ಮಕ್ಕಳ ಹೇಳಿಕೆ ಪಡೆದ ಪೊಲೀಸರು ಅರೋಪಿ ಶಿಕ್ಷಕನ ಮೇಲೆ ಪೊಕ್ಸೋ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.