ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹುತಾತ್ಮ ಯೋಧ ಮನ್ ದೀಪ್ ಸಿಂಗ್ ಪತ್ನಿ ಶನಿವಾರ ಮನವಿ ಮಾಡಿಕೊಂಡಿದ್ದು, ಪಾಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಂಡಿಗಢ (ಅ.29): ಅಂತಾರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆಯಲ್ಲಿ ಈಗಾಗಲೇ ನಮ್ಮ 7ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಆ ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹುತಾತ್ಮ ಯೋಧ ಮನ್ ದೀಪ್ ಸಿಂಗ್ ಪತ್ನಿ ಶನಿವಾರ ಮನವಿ ಮಾಡಿಕೊಂಡಿದ್ದು, ಪಾಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಎಸ್ ಎಫ್ ಯೋಧ ಮನ್ ದೀಪ್ ಸಿಂಗ್ ಅವರನ್ನು ಪಾಕ್ ಸೈನಿಕರು ನಿನ್ನೆ ಹತ್ಯೆಗೈದಿದ್ದರು. ಇಂದು ಹುತಾತ್ಮ ಮನ್ ದೀಪ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಹುಟ್ಟೂರಾದ ಹರ್ಯಾಣದ ಕುರುಕ್ಷೇತ್ರಕ್ಕೆ ಕೊಂಡೊಯ್ಯುತ್ತಿದ್ದ ಸಂದರ್ಭದಲ್ಲಿ ಪತ್ನಿ ಎಎನ್ಐ ಜೊತೆ ಮಾತನಾಡುತ್ತ, ಸರ್ಕಾರಕ್ಕೆ ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ, ಪಾಕಿಸ್ತಾನಕ್ಕೆ ಬುದ್ಧಿ ಹೇಳಿ, ಒಂದು ವೇಳೆ ಅದು ಮಾತು ಕೇಳದಿದ್ದರೆ ಪಾಕಿಸ್ತಾನವನ್ನು ಸರ್ವನಾಶ ಮಾಡಿಬಿಡಿ. ಕನಿಷ್ಠ ಪಕ್ಷ ಪ್ರತಿದಿನ ಕಪ್ಪು ದೀಪಾವಳಿ ಆಗುವುದು ಬೇಡ ಎಂದು ಸಿಂಗ್ ಪತ್ನಿ ತಿಳಿಸಿದ್ದಾರೆ.