ಕರ್ನಾಟಕದಿಂದ ತನಗೆ ಸಿಗಬೇಕಾದ ನೀರು ಬರದೇ ಹೋಗಿದ್ದರಿಂದ ತಮಿಳುನಾಡಿಗೆ ಸಾಕಷ್ಟು ನಷ್ಟವಾಗಿದೆ. ಹೀಗಾಗಿ, ಪರಿಹಾರ ಒದಗಿಸಿಕೊಡಬೇಕು ಎಂದು ತಮಿಳುನಾಡು ಆಗ್ರಹಿಸಿದೆ.
ಚೆನ್ನೈ(ಜ. 09): ಕಾವೇರಿ ನೀರಿನ ವಿಚಾರದಲ್ಲಿ ಪದೇ ಪದೇ ಕರ್ನಾಟಕಕ್ಕೆ ಕ್ಯಾತೆ ತೆಗೆಯುತ್ತಿರುವ ತಮಿಳುನಾಡು ಇದೀಗ ಮತ್ತೊಂದು ತಗಾದೆ ತೆಗೆದಿದೆ. ಕರ್ನಾಟಕದಿಂದ ತನಗೆ 2,480 ಕೋಟಿ ರೂ ಪರಿಹಾರ ಸಿಗಬೇಕೆಂದು ಆಗ್ರಹಿಸಿದೆ. ಸುಪ್ರೀಂಕೋರ್ಟ್ ಆದೇಶ ನೀಡಿದರೂ ಕರ್ನಾಟಕವು ತಮಿಳುನಾಡಿಗೆ ನಿಗದಿತ ಪ್ರಮಾಣದಲ್ಲಿ ಕಾವೇರಿ ನೀರು ಬಿಡುತ್ತಿಲ್ಲ. ಇದು ಸರ್ವೋಚ್ಚ ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದೆ. ಜೊತೆಗೆ, ಕರ್ನಾಟಕದಿಂದ ತನಗೆ ಸಿಗಬೇಕಾದ ನೀರು ಬರದೇ ಹೋಗಿದ್ದರಿಂದ ತಮಿಳುನಾಡಿಗೆ ಸಾಕಷ್ಟು ನಷ್ಟವಾಗಿದೆ. ಹೀಗಾಗಿ, ಪರಿಹಾರ ಒದಗಿಸಿಕೊಡಬೇಕು ಎಂದು ತಮಿಳುನಾಡು ರಾಜ್ಯವು ಸುಪ್ರೀಂಕೋರ್ಟ್'ಗೆ ಮನವಿ ಮಾಡಿಕೊಂಡಿದೆ. ಇದೇ ವೇಳೆ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳು ಇನ್ನೊಂದು ವಾರದಲ್ಲಿ ಸಾಕ್ಷ್ಯಗಳ ಪಟ್ಟಿ ಸಲ್ಲಿಸುವಂತೆ ಆದೇಶಿಸಿದೆ.
