ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಪದೇ, ಪದೇ ಕೇಂದ್ರದ ಮೇಲೆ ಒತ್ತಡ ಹೇರಿದ್ದ ತಮಿಳುನಾಡು

ನವದೆಹಲಿ(ಸೆ.20): ಸುಪ್ರೀಂಕೋರ್ಟ್ ತಮಿಳುನಾಡಿಗೆ ಕಾವೇರಿ ನೀರನ್ನ ಬಿಡುವಂತೆ ಆದೇಶಿಸಿರುವ ಜೊತೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಮಾಡುವಂತೆ ಮಾಡಿರುವ ಆದೇಶ ಮರಣಶಾಸನವಾಗಿದೆ. ಕಾವೇರಿಯ ನಿರ್ವಹಣಾ ಮಂಡಳಿ ರಚನೆಯಾದರೆ ಕಾವೇರಿ ಕೇಂದ್ರದ ವಶಕ್ಕೆ ಸೇರಿ ತಮಿಳುನಾಡಿನ ಪಾರುಪತ್ಯ ಶುರುವಾಗುತ್ತೆ. ಅಂದಹಾಗೆ, ಕರ್ನಾಟಕ ಪದೇ ಪದೇ ವಿರೋಧಿಸುತ್ತಾ ಬಂದಿದ್ದಾ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ತಮಿಳುನಾಡು ತೆರೆಮರೆಯಲ್ಲೇ ಸಂಚು ರೂಪಿಸಿದ್ದು ಸ್ಪಷ್ಟವಾಗಿದೆ.

ಕಾವೇರಿ ನಿರ್ವಹಣಾ ಮಂಡಳಿ ವಿಷಯದಲ್ಲಿ ಕರ್ನಾಟಕ ಸರ್ಕಾರ ಮ್ಐಮರೆತಿತ್ತು. ಆದರೆ, ಮಂಡಳಿ ರಚನೆಗೆ ತಮಿಳುನಾಡು ಸರ್ಕಾರ ತೆರೆಮರೆಯಲ್ಲೇ ತಂತ್ರ ರೂಪಿಸಿತ್ತು. ಖುದ್ದು ಪ್ರಧಾನಿ ಮೋದಿಯನ್ನೇ ಭೇಟಿಯಾಗಿದ್ದ ಜಯಲಲಿತಾ, ಕಾವೇರಿ ಜಲ ಮಂಡಳಿ ರಚಿಸುವಂತೆ ಮೋದಿಗೆ ಒತ್ತಡ ಹೇರಿದ್ದರು. ಅಷ್ಟೇ ಅಲ್ಲ, ಮತ್ತೆ ಪ್ರಧಾನಿ ಮೋದಿಗೆ 25 ಪುಟಗಳ ಪತ್ರ ಬರೆದಿದ್ದ ಜಯಲಲಿತಾ, ಮಂಡಳಿ ರಚನೆಗೆ ಪದೇ, ಪದೇ ಕೇಂದ್ರದ ಮೇಲೆ ಒತ್ತಡ ಹೇರಿದ್ದರು.