ಬೆಂಗಳೂರು(ನ.22): ಉಪಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಜವರಾಯಿಗೌಡ ಪ್ರಚಾರದ ವೇಳೆ ಭಾವೋದ್ವೇಗಕ್ಕೊಳಗಾಗಿ ಕಣ್ಣೀರು ಹಾಕಿದ ಘಟನೆ ನಡೆದಿದೆ.

ಗುರುವಾರ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಜವರಾಯಿಗೌಡ, ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಜನರ ಸೇವೆಯಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿದ್ದೇನೆ. ಸ್ಪರ್ಧಿಸಿರುವ ಎರಡು ಚುನಾವಣೆಯಲ್ಲಿ ಸೋಲನುಭವಿಸಿದ್ದು, ಮೂರನೇ ಬಾರಿ ಕಣಕ್ಕಿಳಿದಿದ್ದೇನೆ. ಈ ಬಾರಿ ಕ್ಷೇತ್ರದ ಜನತೆ ಗೆಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಮೆಜೆಸ್ಟಿಕ್‌ನಲ್ಲಿ ಪ್ಲಾಸ್ಟಿಕ್‌ ಬಾಟಲಿ ಕ್ರಷಿಂಗ್‌ ಮಷಿನ್! ಏನಿದರ ವಿಶೇಷತೆ?

ನನಗೆ ಚುನಾವಣೆ ಬೇಕಾಗಿರಲಿಲ್ಲ. ಅಧಿಕಾರ ಇಲ್ಲದಿದ್ದರೂ ಜನತೆಯ ಸೇವೆ ಮಾಡಲು ಹಿಂದೇಟು ಹಾಕಿಲ್ಲ. ಚುನಾವಣೆಗಾಗಿ ಸಾಕಷ್ಟುಹಣ ವೆಚ್ಚ ಮಾಡಲಾಗಿದೆ. ಆರ್ಥಿಕವಾಗಿ ಶಕ್ತಿ ಇಲ್ಲದಿದ್ದರೂ ಚುನಾವಣೆ ಎದುರಿಸಲಾಗುತ್ತಿದೆ. ಮತದಾರರು ಕೈಬಿಡುವುದಿಲ್ಲ ಎಂದು ನಂಬಿದ್ದೇನೆ. ಈ ಚುನಾವಣೆಯೂ ನನಗೆ ಅಳಿವು-ಉಳಿವಿನ ಪ್ರಶ್ನೆಯಾಗಿದೆ ಎಂದು ಭಾವನಾತ್ಮಕವಾಗಿ ನುಡಿದಿದ್ದಾರೆ.

ಮುನಿಸು ಮರೆತ ನಟ ಜಗ್ಗೇಶ್‌: ಬಿಜೆಪಿ ಪರ ಪ್ರಚಾರ

ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡ ಜವರಾಯಿಗೌಡ ಅವರು ಸಮ್ಮಿಶ್ರ ಸರ್ಕಾರ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಅವಧಿಯ ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿದರು. ಅಲ್ಲದೇ, ಸರ್ಕಾರ ಪತನಗೊಳಿಸುವಲ್ಲಿ ಅನರ್ಹ ಶಾಸಕರ ಪಾತ್ರವಹಿಸಿ ವಂಚನೆ ಮಾಡಿರುವ ಹಿನ್ನೆಲೆಯಲ್ಲಿ ತಮಗೆ ಮತ ನೀಡಬೇಕು ಎಂದು ಮತದಾರರಲ್ಲಿ ಮತಯಾಚಿಸಿದ್ದಾರೆ.

ಬೆಂಗಳೂರಿಗರೆ, ಬಾರ್-ಪಬ್‌ಗಳಿಂದ ಕಿವಿ ಬಿಡೋಕೆ ಆಗ್ತಿಲ್ಲವೇ? ಸ್ವಲ್ಪ ದಿನ ಕಾಯಿರಿ..