ಬೆಂಗಳೂರು(ನ.22): ಕಳೆದ ಬಾರಿ ಅಭ್ಯರ್ಥಿಯಾಗಿದ್ದಲ್ಲದೆ ಈ ಬಾರಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಬಿಜೆಪಿ ಮುಖಂಡ ಹಾಗೂ ನಟ ಜಗ್ಗೇಶ್‌ ಅವರು ತಮ್ಮ ಮುನಿಸನ್ನು ಮರೆತು ಪಕ್ಷದ ಅಭ್ಯರ್ಥಿ ಎಸ್‌.ಟಿ.ಸೋಮಶೇಖರ್‌ ಪರ ಯಶವಂತಪುರ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ.

ಗುರುವಾರ ಬೆಳಗ್ಗೆ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಆರಂಭಿಸುವ ಮುನ್ನ ಕೆಂಗೇರಿಯ ಬಿಎಂಪಿಯ ಕಚೇರಿಯಲ್ಲಿ ಸೋಮಶೇಖರ್‌ ಮತ್ತು ಜಗ್ಗೇಶ್‌ ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿ, ತಮ್ಮಿಬ್ಬರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ನಮಾಜ್‌ ವೇಳೆ ಮಸೀದಿ ಮುಂದೆ ಪ್ರಚಾರ ಭಾಷಣ ನಿಲ್ಲಿಸಿದ ಜಗ್ಗೇಶ್

ಪಕ್ಷವು ಯಾರಿಗೆ ಟಿಕೆಟ್‌ ನೀಡಿರಲಿ. ಅವರ ಗೆಲುವಿಗೆ ನಾನು ಕಾಯಾ, ವಾಚಾ, ಮನಸಾ ಶ್ರಮಿಸುತ್ತೇನೆ. ವ್ಯಕ್ತಿಗಿಂತ ಪಕ್ಷ ಮುಖ್ಯ. ಸೋಮಶೇಖರ್‌ ಜಯಗಳಿಸುವವರೆಗೆ ಶ್ರಮ ವಹಿಸುತ್ತೇನೆ. ರಾಜಕೀಯ ವಿರೋಧಿಗಳು ನಾನು ಪ್ರಚಾರಕ್ಕೆ ಬಾರದೆ ದೂರ ಉಳಿದಿದ್ದೇನೆ ಎಂದು ಅಪಪ್ರಚಾರ ಮಾಡುತ್ತಾರೆ. ಇದಕ್ಕೆ ಯಾರು ತಲೆಕೆಡಿಸಿಕೊಳ್ಳಬಾರದು. ಪಕ್ಷ ನೀಡಿರುವ ಜವಾಬ್ದಾರಿಯನ್ನು ಶಿರಸಾವಹಿಸಿ ಪಾಲಿಸುತ್ತೇನೆ ಎಂದು ಹೇಳಿದ್ದಾರೆ. ತರುವಾಯ ಕೆಂಗೇರಿ ಉಪನಗರದಲ್ಲಿನ ಗುರುರಾಯರ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ.

ಪ್ರಿಯಾ ವಾರಿಯರ್ ವಿವಾದ: ನಾನು ಯಾವ ನಟಿಯನ್ನು ವಿರೋಧಿಸಿಲ್ಲ ಎಂದ ಜಗ್ಗೇಶ್