ರಾಸಯನಿಕ ದಾಳಿಯಿಂದ ಬದುಕಿ ಬಂದ ಪುಟ್ಟ ಬಾಲಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸಿರಿಯಾದಲ್ಲಿ ನಡೆಯುತ್ತಿರುವ ಯುದ್ದದಲ್ಲಿ ನಾಗರೀಕರು ಸಾವಿರಾರು ಸಂಖ್ಯೆಯಲ್ಲಿ ಸಾವಿನ ದವಡೆಗೆ ಸಿಲುಕುತ್ತಿದ್ದರೆ, ಕೆಲವರು ದೇಶವನ್ನು ತೊರೆಯುತ್ತಿದ್ದಾರೆ. ಅಲ್ಲಿಯೇ ಉಳಿದ ಹಲವರು ನಡೆಯುತ್ತಿರುವ ಯುದ್ದಕ್ಕೆ ಸಾಕ್ಷಿಯಾಗುತ್ತಿದ್ದಾರೆ.
ಯಾವುದನ್ನು ಅರಿದ ಸಾವಿರಾರು ಸಂಖ್ಯೆ ಮುಗ್ಧ ಮಕ್ಕಳು ಸಹ ಈ ದುರಂತದಲ್ಲಿ ಸಾವನ್ನಪ್ಪುತ್ತಿದ್ದು, ಸದ್ಯ ನಡೆಯುತ್ತಿರುವ ರಾಸಯನಿಕ ದಾಳಿಯಿಂದ ಬದುಕಿ ಬಂದ ಪುಟ್ಟ ಬಾಲಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ತನ್ನನ್ನು ರಕ್ಷಸಿ ಚಿಕಿತ್ಸೆ ನೀಡುತ್ತಿದ್ದ ನರ್ಸ್ ನನ್ನು ಆ ಬಾಲಕ ಕೇಳವ ಪ್ರಶ್ನೆ ಮನ ಕಲಕುವಂತಿದೆ.
ಮೊದಲಿಗೆ ದಾಳಿಯ ಚಿತ್ರಣ ಬಿಡಿಸಿಡುವ ಬಾಲಕ ತನ್ನ ಸಹೋದರರೂ ದಾಳಿಯಲ್ಲಿ ಸಿಲುಕಿದ್ದಾರೆ ಎಂದು ಹೇಳುವುದಲ್ಲದೇ 'ನಾನು ಸಾಯುತ್ತೇನೆಯೇ' ಎಂದು ಹೇಳುವ ದೃಶ್ಯ ಕಣ್ಣಂಚಲಿ ನೀರು ತರಿಸುತ್ತದೆ.
