ದುಡ್ಡಿಗಾಗಿ ಇಬ್ಬರು ಮಹಿಳೆಯರನ್ನು ಮದುವೆಯಾಗಿ ವಂಚಿಸುವ ಮೂಲಕ ದೇಶಾದ್ಯಂತ ಸುದ್ದಿಯಾಗಿರುವ ಉತ್ತರಾಖಂಡದ ಸ್ವೀಟಿ ಸೇನ್‌ಳ ಮತ್ತೊಂದು ಕರಾಳ ಮುಖ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಉತ್ತರಾಖಂಡ್ : ದುಡ್ಡಿಗಾಗಿ ಇಬ್ಬರು ಮಹಿಳೆಯರನ್ನು ಮದುವೆಯಾಗಿ ವಂಚಿಸುವ ಮೂಲಕ ದೇಶಾದ್ಯಂತ ಸುದ್ದಿಯಾಗಿರುವ ಉತ್ತರಾಖಂಡದ ಸ್ವೀಟಿ ಸೇನ್‌ಳ ಮತ್ತೊಂದು ಕರಾಳ ಮುಖ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

2 ಮದುವೆಯಾದ ಬಳಿಕ, ಈಗಾಗಲೇ ಮದುವೆಯಾಗಿರುವ ಮತ್ತೋರ್ವ ಮಹಿಳೆಯನ್ನೂ ಮದುವೆಯಾಗಲು ಸ್ವೀಟಿ ಸ್ಕೆಚ್ ಹಾಕಿದ್ದರು.

ಜೊತೆಗೆ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಜೊತೆಗೂ ಆಕೆಯ ನಂಟು ಇತ್ತು ಎಂಬುದು ಬೆಳಕಿಗೆ ಬಂದಿದೆ. ಅಲ್ಲದೆ ಮದುವೆ ವೇಳೆ ಖರೀದಿಸಿದ ವಸ್ತುಗಳಿಗೆ ಆಕೆ ನೀಡಿದ ಬಹುತೇಕ ಎಲ್ಲಾ ಚೆಕ್‌ಗಳು ಬೌನ್ಸ್ ಆಗಿವೆ.