ಭಕ್ತಿಯಿಂದ ಮಠಕ್ಕೆ ಆಗಮವಿಸಿದ ಮಹಿಳೆಯೊಂದಿಗೆ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮಿ ಮಂಚ ಏರಿದ್ದಾನೆ. ಭಕ್ತರು ಅಪಾರ ನಂಬಿಕೆ ಇಟ್ಟಿರುವಂತಹ ಕಾವಿ ತೊಟ್ಟು, ಇಂತಹದೊಂದು ನೀಚ ಕೆಲಸಕ್ಕೆ ಸ್ವಾಮೀಜಿ ಇಳಿದಿರುವುದು ನಿಜಕ್ಕೂ ವಿಪರ್ಯಾಸ.
ಬೆಂಗಳೂರು(ಅ.26): ರಾಜ್ಯದ ಮತ್ತೊಬ್ಬ ಸ್ವಾಮೀಜಿ ಕಾಮ ಪುರಾಣ ಹೊರಬಿದ್ದಿದೆ. ಕನ್ನಡದ ಚಿತ್ರನಟಿಯೊಬ್ಬಳ ಜತೆ ಕಾಮದಾಟ ನಡೆಸಿದ EXCLUSIVE ದೃಶ್ಯಾವಳಿ ಸುವರ್ಣನ್ಯೂಸ್'ಗೆ ಲಭ್ಯವಾಗಿದೆ.
ಹೌದು, 500 ವರ್ಷಗಳ ಇತಿಹಾಸವಿರುವ ಬೆಂಗಳೂರಿನ ಹುಣಸಮಾರನಹಳ್ಳಿ ಸಂಸ್ಥಾನ ಮಠದ ಪೀಠಾಧ್ಯಕ್ಷ ಪರ್ವತರಾಜ ಶಿವಾಚಾರ್ಯ ಸ್ವಾಮಿ ಮಗ ದಯಾನಂದ ಅಲಿಯಾಸ್ ಪಟ್ಟದ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮೀಯೇ ಕಾಮ ಪಲ್ಲದಾಟವಾಡಿದ ಮಹಾಶಯ. ಲಕ್ಷ ಲಕ್ಷ ಕೋಟಿ ಬೆಲೆ ಬಾಳುವ ಮಠದ ಆಸ್ತಿಯನ್ನ ನುಂಗಿ ನೀರು ಕುಡಿದ ಈತ. ಬ್ರಹ್ಮಚಾರಿ ಮಠ ಈತನ ಅನೈತಿಕ ಸಂಬಂಧದಿಂದಾಗಿ ಈಗ ಸಂಸಾರಿ ಮಠವಾಗಿ ಮಾರ್ಪಟ್ಟಿದೆ.
ಈತನ ತಂದೆ ಪರ್ವತರಾಜ ಶಿವಾಚಾರ್ಯ ಸ್ವಾಮಿಯೂ ಮಹಾನ್ ಕಾಮುಕ. ತಂದೆಯ ಹಾದಿಯಲ್ಲೇ ಮಗ ಈಗಿನ ಪೀಠಾಧ್ಯಕ್ಷ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮಿ ನಡೆದಿದ್ದಾನೆ. ಭಕ್ತಿಯಿಂದ ಮಠಕ್ಕೆ ಬರುವ ಮಹಿಳೆಯರನ್ನೇ ಮಂಚಕ್ಕೆ ಕರೆಯುತ್ತಾನೆ. ಈತನಿಗೆ ಪೀಠದಲ್ಲಿ ಕೂರುವ ಯಾವುದೇ ಅರ್ಹತೆಯಿಲ್ಲ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಡಿಬಾರ್ ಆದ ಈತನನ್ನೇ ಪೀಠಾಧ್ಯಕ್ಷನನ್ನಾಗಿ ಮಾಡಲಾಗಿದೆ. ಭಕ್ತಿಯಿಂದ ಮಠಕ್ಕೆ ಆಗಮವಿಸಿದ ಮಹಿಳೆಯೊಂದಿಗೆಗುರುನಂಜೇಶ್ವರ ಶಿವಾಚಾರ್ಯ ಸ್ವಾಮಿ ಮಂಚ ಏರಿದ್ದಾನೆ. ಭಕ್ತರು ಅಪಾರ ನಂಬಿಕೆ ಇಟ್ಟಿರುವಂತಹ ಕಾವಿ ತೊಟ್ಟು, ಇಂತಹದೊಂದು ನೀಚ ಕೆಲಸಕ್ಕೆ ಸ್ವಾಮೀಜಿ ಇಳಿದಿರುವುದು ನಿಜಕ್ಕೂ ವಿಪರ್ಯಾಸ. ಮಠಗಳ ಮೇಲೆ ಇರುವ ನಂಬಿಕೆ, ಭಕ್ತಿ, ಶ್ರದ್ಧೆಯನ್ನೇ ಇಂತಹ ಸ್ವಾಮೀಜಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
ಈತನನ್ನು ಮೊದಲು ಮಠದಿಂದ ಓಡಿಸಿ ಎಂದು ಅಲ್ಲಿನ ಮಠದ ಸದಸ್ಯರೇ ಮನವಿ ಮಾಡಿಕೊಳ್ಳುತ್ತಿದ್ದಾರೆ.ಕಾಮುಕ ಸ್ವಾಮಿಯ ಘನಂದಾರಿ ಕೆಲಸವನ್ನ ಸುವರ್ಣನ್ಯೂಸ್ ನಿಮ್ಮ ಮುಂದೆ ಬಿಚ್ಚಿಟ್ಟಿದೆ.


