- Home
- News
- India News
- Kodi Mutt Shree Swamiji: ವಾಯು ಮೂಲಕ ಪ್ರಾಣಾಪಾಯ; ಈ ಬಾರಿ ಘನಗೋರ ಗಂಡಾಂತರ, ರಾಜನ ಮನೆಗೆ ಕಾರ್ಮೋಡ
Kodi Mutt Shree Swamiji: ವಾಯು ಮೂಲಕ ಪ್ರಾಣಾಪಾಯ; ಈ ಬಾರಿ ಘನಗೋರ ಗಂಡಾಂತರ, ರಾಜನ ಮನೆಗೆ ಕಾರ್ಮೋಡ
ಯಾವಾಗಲೂ ಭಯಂಕರ ಭವಿಷ್ಯ ಹೇಳಿ ಸದ್ದು ಮಾಡುವ ಕೋಡಿಶ್ರೀಗಳು ಈ ಬಾರಿ ಕೂಡ ಮಹಾಮಾರಿ ರೋಗದ ಮುನ್ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೆ ರಾಜಕಾರಣಿಗಳು, ಸರ್ಕಾರದ ಬಗ್ಗೆಯೂ ಮೌನ ಮುರಿದಿದ್ದಾರೆ.

ಮತ್ತೆ ಕೊರೊನಾ ಹಾವಳಿ
ಮಹಾರಾಷ್ಟ್ರದಲ್ಲಿ, ನಮ್ಮ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಕೊರೊನಾ ವೈಸರ್ ಪತ್ತೆಯಾಗಿದೆ ಒಬ್ಬ ಗರ್ಭಿಣಿ ಮಹಿಳೆ ಬಂದಿದೆ ಏನು ಹೇಳ್ತೀರಿ ಎಂದು ಪತ್ರಕರ್ತರು ಪ್ರಶ್ನೆ ಮಾಡಿದ್ದರು.
ವಾಯು ರೂಪದಲ್ಲಿ ರೋಗ
ಅದಕ್ಕೆ ಅವರು “ಈ ಸಂವತ್ಸರ ಫಲದಲ್ಲಿ ಒಂದು ಹೊಸ ರೋಗ ಬರೋ ಸೂಚನೆ ಇದೆ, ಆಗಲೇ ಬಂದಿದೆ. ಇದು ಐದು ವರ್ಷ ತನಕ ಇರುತ್ತೆ. ಇದು ಎಲ್ಲ ಕಡೆ ಆವರಿಸುತ್ತದೆ, ಈ ರೋಗ ಮತ್ತೊಂದು ರೂಪವನ್ನು ತಾಳುತ್ತದೆ. ವಾಯು ರೂಪದಲ್ಲಿ ಬರುತ್ತದೆ. ನಾವು ದೇವರ ಪ್ರಾರ್ಥನೆ ಮಾಡಬೇಕು” ಎಂದಿದ್ದಾರೆ.
ಎಲ್ಲವೂ ಮಾಲಿನ್ಯ ಆಗಿದೆ!
“ಎಲ್ಲ ಮಾಲಿನ್ಯವೂ ಆಗಿದೆ. ವಾಯು ರೂಪದಲ್ಲಿ ಬಂದು, ಕಫ ಆಗಿ, ಉಸಿರಾಟಕ್ಕೆ ತೊಂದರೆಯಾಗಿ ಮನುಷ್ಯನಿಗೆ ಸಾವು ಬರೋ ಲಕ್ಷಣ ಬಹಳ ಇದೆ. ಇದು ಐದು ವರ್ಷ ಇರಲಿದೆ” ಎಂದು ಹೇಳಿದ್ದಾರೆ.
ರಾಜಕಾರಣದ ಕಥೆ ಏನು?
“ಜನರಲ್ಲಿ ಅಶಾಂತಿ ಇದೆ. ರಾಜನ ಅರಮನೆಗೆ ಕಾರ್ಮೋಡ ಕವಿದಿದೆ. ರಾಜ್ಯ ರಾಜಕಾರಣದಲ್ಲಿ ಏನಾಗಲಿದೆ ಎಂದು ಸಂಕ್ರಾಂತಿ ನಂತರ ಹೇಳ್ತೀನಿ. ರಾಜ್ಯ ರಾಜಕಾರಣಿಗಳಿಗೂ ಸಾವಿದೆ” ಎಂದಿದ್ದಾರೆ.
ಮೇಘಸ್ಫೋಟ ಆಗಲಿದೆ!
“ಮೇಘಸ್ಫೋಟ ಆಗುತ್ತದೆ. ಹಿಮಾಲಯದಿಂದ ಅಪಾಯ ಇದೆ. ಭೂಕಂಪಗಳು ಆಗುತ್ತವೆ. ಮತೀಯ ಗಲಭೆ ಆಗುವುದು” ಎಂದಿದ್ದಾರೆ.