Asianet Suvarna News Asianet Suvarna News

ಸ್ವಾಮೀಜಿಯ ಆಸ್ತಿ ನುಂಗುವ ಹುನ್ನಾರಕ್ಕೆ ಬ್ರೇಕ್: ಕಳ್ಳ ಸ್ವಾಮಿಗೆ ತಪ್ಪಿತು ಪೀಠಾಧ್ಯಕ್ಷ ಸ್ಥಾನ

ಹುಣಸಮಾರನಹಳ್ಳಿ ಮಠಕ್ಕೆ ಸೇರಿದ ಕೋಟ್ಯಾಂತರ ರೂಪಾಯಿ ಬೆಲೆಬಾಳುವ  ಭೂಮಿಯನ್ನ, ತಿಂದು ತೇಗಿದ ಕಳ್ಳ ಸ್ವಾಮಿ, ಉಳಿದ ಮಠದ ಆಸ್ತಿಯನ್ನು ನುಂಗಲು  ಹುನ್ನಾರ ನಡೆಸಿದ್ದ. ಆದರೆ ಸುವರ್ಣನ್ಯೂಸ್ ವರದಿಯಿಂದ  ಕಳ್ಳಸ್ವಾಮಿಯ ಆಸ್ತಿ ಕಬಳಿಸುವ ಹುನ್ನಾರಕ್ಕೆ ಬ್ರೇಕ್ ಬಿದ್ದಿದೆ. ಇದು ಸುವರ್ಣನ್ಯೂಸ್ ಬಿಗ್ ಇಂಪ್ಯಾಕ್ಟ್

Swamiji Can Not ake His Son As His Successor Now
  • Facebook
  • Twitter
  • Whatsapp

ಬೆಂಗಳೂರು(ಜೂ.20): ಹುಣಸಮಾರನಹಳ್ಳಿ ಮಠಕ್ಕೆ ಸೇರಿದ ಕೋಟ್ಯಾಂತರ ರೂಪಾಯಿ ಬೆಲೆಬಾಳುವ  ಭೂಮಿಯನ್ನ, ತಿಂದು ತೇಗಿದ ಕಳ್ಳ ಸ್ವಾಮಿ, ಉಳಿದ ಮಠದ ಆಸ್ತಿಯನ್ನು ನುಂಗಲು  ಹುನ್ನಾರ ನಡೆಸಿದ್ದ. ಆದರೆ ಸುವರ್ಣನ್ಯೂಸ್ ವರದಿಯಿಂದ  ಕಳ್ಳಸ್ವಾಮಿಯ ಆಸ್ತಿ ಕಬಳಿಸುವ ಹುನ್ನಾರಕ್ಕೆ ಬ್ರೇಕ್ ಬಿದ್ದಿದೆ. ಇದು ಸುವರ್ಣನ್ಯೂಸ್ ಬಿಗ್ ಇಂಪ್ಯಾಕ್ಟ್

ಬೆಂಗಳೂರಿನ ಹುಣಸಮಾರನಹಳ್ಳಿ ಸಂಸ್ಥಾನ ಮಠದ ಪರ್ವತರಾಜ ಶಿವಾಚಾರ್ಯ ಸ್ವಾಮಿಗಳು ತನ್ನ ಪುಂಡ ಮಗ ದಯಾನಂದ ಆಲಿಯಾಸ ನಂಜೇಸ್ವರ ಸ್ವಾಮಿ ಜೊತೆ ಆಸ್ತಿ ಮಾರಾಟ ಮಾಡುವ ಹುನ್ನಾರಕ್ಕೆ ಬ್ರೇಕ್ ಬಿದ್ದಿದೆ. ಮಠದ 60 ಎಕರೆ ಭೂಮಿಯನ್ನ ಕೋಟಿ ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದ ಪರ್ವತರಾಜ ಶಿವಾಚಾರ್ಯ ಸ್ವಾಮಿಗಳು, ತನ್ನ ಮಗನ ಜೊತೆ  ಉಳಿದ 70 ಎಕೆರೆ ಭೂಮಿಯನ್ನ ಮಾರಾಟ ಮಾಡಲು ಹುನ್ನಾರ ನಡೆಸಿದ್ದ.  ಈ ಬಗ್ಗೆ  ಸುವರ್ಣನ್ಯೂಸ್​  ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಹೀಗಾಗಿ  ಭಾನುವಾರ ನಡೆಯಬೇಕಿದ ಪೀಠಾಧ್ಯಕ್ಷರ ಪಟ್ಟಾಭಿಷೇಕ ಕಾರ್ಯಕ್ರಮ ರದ್ದಾಗಿದೆ.. ಪಟ್ಟಾಭೀಷೇಕಕ್ಕೆ ಬರಬೇಕಾದ ಶ್ರೀಗಳೆಲ್ಲ ಇವರ ಅಸಲಿಯತ್ತು ತಿಳಿದು ಕಾರ್ಯಕ್ರಮಕ್ಕೆ ಬರಲಿಲ್ಲ.

ಪರ್ವತರಾಜ ಶಿವಾಚಾರ್ಯರ ಗುರುವಂದನಾ ಕಾರ್ಯಕ್ರಮದ ಜೊತೆಗೆ  ಅವರ ಮಗ  ದಯಾನಂದನ ಪಟ್ಟಾಭಿಷೇಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.. ಆದ್ರೆ, ದಯಾನಂದನ ಅಸಲಿಯತ್ತನ ಸುವರ್ಣನ್ಯೂಸ್​​ ಬಯಲು ಮಾಡುತ್ತಿದ್ದಂತೆ ಪಟ್ಟಾಭಿಷೇಕ ಕಾರ್ಯಕ್ರಮ ರದ್ದಾಗಿದೆ. ಕೇವಲ  ಪರ್ವತರಾಜರ ಗುರುವಂದನಾ ಕಾರ್ಯಕ್ರಮ ಮಾತ್ರ ನಡೆದಿದೆ.

ಇನ್ನಾದರೂ ವೀರಶೈವ ಸಮಾಜ, ಸೂಕ್ತ ಮಠಾಧ್ಯಕ್ಷರನ್ನು ಆಯ್ಕೆ ಮಾಡಬೇಕಾಗಿದೆ. ಈ ಮೂಲಕ  ಮಠದ  ಆಸ್ತಿ ಕಬಳಿಸುವ ಹುನ್ನಾರಕ್ಕೆ ತಡೆಹಾಕಬೇಕಾಗಿದೆ.

Follow Us:
Download App:
  • android
  • ios