ಅರ್ಜಿ ಕಳುಹಿಸಲು ಕೊನೆಯ ದಿನಾಂಕ ಏಪ್ರಿಲ್ 20, 2017 ಆಗಿದೆ. ಕೆಲವೇ ದಿನ ಬಾಕಿ ಇದೆ. ತ್ವರೆ ಮಾಡಿ.

ಬೆಂಗಳೂರು(ಏ. 11): ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಾ ಬಂದಿರುವ ಸುವರ್ಣನ್ಯೂಸ್ ವಾಹಿನಿಯು ಈಗ "ಮಹಿಳಾ ಸಾಧಕಿಯರು" ಪ್ರಶಸ್ತಿ ಕಾರ್ಯಕ್ರಮ ಆಯೋಜಿಸುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆಗೈದ ಮಹಿಳೆಯರನ್ನು ಗುರುತಿಸಿ ಸನ್ಮಾನಿಸುವ ವಿಶಿಷ್ಟ ಕಾರ್ಯಕ್ರಮ ಇದಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

10 ವಿಭಾಗಗಳ ಪಟ್ಟಿ:
1) ಸಾಮಾಜಿಕ ನ್ಯಾಯ
2) ಶಿಕ್ಷಣ
3) ಆರೋಗ್ಯ
4) ಸಾಹಿತ್ಯ
5) ವಿಕಲಚೇತನ
6) ಕಲೆ ಮತ್ತು ಸಂಸ್ಕೃತಿ
7) ವಿಜ್ಞಾನ
8) ಕ್ರೀಡೆ
9) ರಂಗಭೂಮಿ
10) ಕೃಷಿ

ರಾಜ್ಯದಲ್ಲಿ ಈ ಮೇಲ್ಕಂಡ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸುವ ಪ್ರಕ್ರಿಯೆ ಆರಂಭವಾಗಿದೆ. ನೀವೂ ಕೂಡ ಇಂಥ ಸಾಧಕಿಯಾಗಿದ್ದಲ್ಲಿ, ಅಥವಾ ನಿಮಗೆ ಅಂಥವರ ಬಗ್ಗೆ ಗೊತ್ತಿದ್ದಲ್ಲಿ ಈ ಕೆಳಕಾಣಿಸಿದ ವಿಳಾಸಕ್ಕೆ ಸಂಪರ್ಕಿಸಿ.

ನಮ್ಮ ವಿಳಾಸ:
ಮಹಿಳಾ ಸಾಧಕಿಯರು ವಿಭಾಗ
ಸುವರ್ಣನ್ಯೂಸ್
ನಂ.36, ಕ್ರೆಸೆಂಟ್ ರಸ್ತೆ, ಬೆಂಗಳೂರು-560001

ದೂರವಾಣಿ:
080 - 30556300

ಇಮೇಲ್ ವಿಳಾಸ:
ms2017@suvarnanews.in

ಅರ್ಜಿ ಕಳುಹಿಸಲು ಕೊನೆಯ ದಿನಾಂಕ ಏಪ್ರಿಲ್ 20, 2017 ಆಗಿದೆ. ಕೆಲವೇ ದಿನ ಬಾಕಿ ಇದೆ. ತ್ವರೆ ಮಾಡಿ.