ಸುವರ್ಣ ನ್ಯೂಸ್ ಇಂಪ್ಯಾಕ್ಟ್:ಗರ್ಭಿಣಿಯರಿಗೆ ಅನುಕೂಲ

ಬೀದರ್(ಅ.5): ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಕಳೆದ 15ದಿನಗಳಿಂದ ಬಡ ಗರ್ಭಿಣಿಯರಿಗೆ ಮತ್ತು ಹೊರ ರೋಗಿಗಳನ್ನು ಸ್ಕ್ಯಾನಿಂಗ್​ ಮಾಡದೇ ದಿನಾಂಕ ನೀಡಿ ಖಾಸಗಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್​ ಮಾಡಿಕೊಳ್ಳಿ ಎಂದು ಬೆದರಿಸುತ್ತಿದ್ದ ಜಿಲ್ಲಾಸ್ಪತ್ರೆಯ ಸಿಬ್ಬಂದಿ, ವೈದ್ಯಧಿಕಾರಿಗಳ ಕರ್ಮಕಾಂಡದ ಬಗ್ಗೆ ಇಂದು ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು.

ವರದಿ ಪ್ರಸಾರವಾಗುತ್ತಿದಂತೆ ಎಚ್ಚೆತ್ತುಕೊಂಡು ಬೀದರ್​ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳು ತಕ್ಷಣ ಹಳೆ ಆಸ್ಪತ್ರೆಯ ಬಿಲ್ಡಿಂಗ್​ನಿಂದ ಹೊಸ ಕಟ್ಟಡಕ್ಕೆ ಡಯಾಗ್ನೊಸ್ಟಿಕ್​ ಲ್ಯಾಬರೇಟರಿಯನ್ನು ಸ್ಥಳಾಂತರಿಸಿ ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡಲು ಅನುಕೂಲ ಕಲ್ಪಿಸಿದ್ದಾರೆ.