ಮೂರು ದಿನಗಳ ಹಿಂದೆ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಚೇತರಿಸಿಕೊಳ್ಳುತ್ತಿದ್ದು ಅವರನ್ನು ತುರ್ತು ನಿಗಾ ಘಟಕದಿಂದ ವರ್ಗಾವಣೆ ಮಾಡಲಾಗಿದೆ ಎಂದು ಏಮ್ಸ್ ತಿಳಿಸಿದೆ.

ನವದೆಹಲಿ (ಡಿ.13): ಮೂರು ದಿನಗಳ ಹಿಂದೆ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಚೇತರಿಸಿಕೊಳ್ಳುತ್ತಿದ್ದು ಅವರನ್ನು ತುರ್ತು ನಿಗಾ ಘಟಕದಿಂದ ವರ್ಗಾವಣೆ ಮಾಡಲಾಗಿದೆ ಎಂದು ಏಮ್ಸ್ ತಿಳಿಸಿದೆ.

ಸುಷ್ಮಾರವರು ಚೇತರಿಸಿಕೊಳ್ಳುತ್ತಿದ್ದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡ ಅವರನ್ನು ತಪಾಸಣೆ ನಡೆಸುತ್ತಿದೆ. ಇನ್ನು 7-10 ದಿನದೊಳಗೆ ಡಿಸ್ ಚಾರ್ಜ್ ಮಾಡುವ ಸಾಧ್ಯತೆಯಿದೆ ಏಮ್ಸ್ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.