ಕೇಂದ್ರದ ಜನಪ್ರಿಯ ಸಚಿವರಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕೂಡಾ ಒಬ್ಬರು. ಆದರೆ ಇದೀಗ ಸ್ವತಃ ಸುಷ್ಮಾ ಸ್ವರಾಜ್ ಬಿಜೆಪಿ ಬೆಂಬಲಿ ಗರು ಮತ್ತು ಹಲವು ಹಿಂದೂ ಪರ ಸಂಘಟನೆಗಳ ಕಾರ್ಯ ಕರ್ತರಿಂದ ಟ್ವೀಟರ್ ನಲ್ಲಿ ತೀವ್ರ ವಾಗ್ದಾಳಿಗೆ ಗುರಿಯಾ ಗಿದ್ದಾರೆ.
ನವದೆಹಲಿ: ಕೇಂದ್ರದ ಜನಪ್ರಿಯ ಸಚಿವರಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕೂಡಾ ಒಬ್ಬರು. ಆದರೆ ಇದೀಗ ಸ್ವತಃ ಸುಷ್ಮಾ ಸ್ವರಾಜ್ ಬಿಜೆಪಿ ಬೆಂಬಲಿ ಗರು ಮತ್ತು ಹಲವು ಹಿಂದೂ ಪರ ಸಂಘಟನೆಗಳ ಕಾರ್ಯ ಕರ್ತರಿಂದ ಟ್ವೀಟರ್ ನಲ್ಲಿ ತೀವ್ರ ವಾಗ್ದಾಳಿಗೆ ಗುರಿಯಾ ಗಿದ್ದಾರೆ. ಇದಕ್ಕೆಲ್ಲಾ ಕಾರಣ ವಾಗಿದ್ದು, ಉತ್ತರಪ್ರದೇಶದ ಲಕ್ನೋದ ಪಾಸ್ ಪೋರ್ಟ್ ಕಚೇರಿಯ ಅಧಿಕಾರಿಯೊಬ್ಬರ ವರ್ಗ. ಹಿಂದು-ಮುಸ್ಲಿಂ ಜೋಡಿಯೊಂದು ಇತ್ತೀಚೆಗೆ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಆದರೆ ಸೂಕ್ತ ಮಾಹಿತಿ ನೀಡಿರಲಿಲ್ಲ ಎಂಬ ಕಾರಣಕ್ಕೆ ಅಧಿಕಾರಿ ಅರ್ಜಿಯನ್ನು ತಿರಸ್ಕರಿಸಿದ್ದರು. ಆದರೆ ದಂಪತಿ ಈ ಬಗ್ಗೆ ಸುಷ್ಮಾಗೆ ಟ್ವೀಟರ್‌ನಲ್ಲೇ ದೂರು ನೀಡಿ, ಧರ್ಮದ ಆಧಾರದ ಮೇಲೆ ತಮಗೆ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸುಷ್ಮಾ ಸಂಬಂಧ ಪಟ್ಟ ಅಧಿಕಾರಿಯನ್ನು ವರ್ಗ ಮಾಡಿದ್ದರು. ಅವರ ಈ ಕ್ರಮದ ವಿರುದ್ಧ ಇದೀಗ ಹಲವು ಬಿಜೆಪಿ ನಾಯಕರು ಮತ್ತು ಹಿಂದೂ ಪರ ಸಂಘಟನೆಗಳು ಟ್ವೀಟರ್, ಫೇಸ್‌ಬುಕ್‌ನಲ್ಲಿ ವಾಗ್ದಾಳಿ ನಡೆಸಿದ್ದಾರೆ.
ವಿಶೇಷವೆಂದರೆ ತಮ್ಮ ವಿರುದ್ಧ ಮಾಡಲಾದ ವಾಗ್ದಾಳಿಯ ಟ್ವೀಟ್‌ಗಳನ್ನು ಸ್ವತಃ ಸುಷ್ಮಾ ರೀಟ್ವೀಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ನಾನು ಜೂ. 17 ರಿಂದ ಜೂ.23 ರ ವರೆಗೆ ಭಾರತದಲ್ಲಿ ಇರಲಿಲ್ಲ. ನನ್ನ ಅನುಪಸ್ಥಿತಿಯಲ್ಲಿ ಏನಾಗಿದೆ ಎಂದು ಗೊತ್ತಿಲ್ಲ. ಆದರೂ ಕೆಲವು ನಿಮ್ಮ ಕೆಲವು ಟ್ವೀಟ್‌ಗಳನ್ನು ನಾನು ಗೌರವಿಸುತ್ತೇನೆ. ಕೆಲವನ್ನು ಹಂಚಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
