ನವದೆಹಲಿ (ಮಾ. 06): ಪಾಕಿಸ್ತಾನದ ಜೊತೆಗಿನ ಬೆಳವಣಿಗೆಯಿಂದಾಗಿ ನಿಧಾನವಾಗಿ ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಸ್ವಲ್ಪ ಮಟ್ಟಿಗಿನ ಬದಲಾವಣೆ ಕಾಣುತ್ತಿದ್ದು, ಬಿಜೆಪಿ ಮತ್ತೆ ತನ್ನ ಮತಗಳನ್ನು ಕ್ರೋಢೀಕರಿಸಲು ಆರಂಭಿಸಿದೆ.

ದೇವೇಗೌಡ್ರ ಇನ್ನೋರ್ವ ಪುತ್ರನ ವಿರುದ್ಧ ತನಿಖೆಗೆ ಆದೇಶಿಸಿದ ಎಚ್‌ಡಿಕೆ ಸರ್ಕಾರ!

ಒಂದು ತಿಂಗಳ ಹಿಂದಷ್ಟೇ ಯಾದವ, ಮುಸ್ಲಿಂ, ದಲಿತ, ಜಾಟರ ಮತಗಳ ಸಾಲಿಡ್‌ ವೋಟ್‌ ಬ್ಯಾಂಕ್‌ ಕಾರಣದಿಂದ ಯುಪಿಯಲ್ಲಿ ಅಭೇಧ್ಯವಾಗಿ ಕಾಣುತ್ತಿದ್ದ ಮಹಾಗಠಬಂಧನ್‌, ಈಗ ಪಾಕ್‌ ಮೇಲಿನ ವೈಮಾನಿಕ ದಾಳಿ ನಂತರ ಬದಲಾಗುವ ಲಕ್ಷಣಗಳು ಕಾಣತೊಡಗಿವೆ.

ಪಂಜಾಬ್‌ ಹೊರತುಪಡಿಸಿದರೆ ಬಹುತೇಕ ಬಿಹಾರದಿಂದ ಹಿಡಿದು ಮಹಾರಾಷ್ಟ್ರದವರೆಗೆ 230 ಸೀಟ್‌ಗಳಲ್ಲಿ ಸೇನಾ ಬೆಳವಣಿಗೆಗಳು ಪರಿಣಾಮ ಬೀರಬಹುದು ಎಂದು ಒಂದು ಅಂದಾಜಿದೆ. ಆದರೆ ಚುನಾವಣೆ ನಡೆಯುವವರೆಗೆ ಯಮುನೆಯಲ್ಲಿ ಸಾಕಷ್ಟುನೀರು ಹರಿಯುವುದು ಬಾಕಿ ಇದೆ.

ಖರ್ಗೆ ಬಗ್ಗೆ ಚಕಾರವೆತ್ತದ ಮೋದಿ: ಪ್ಲ್ಯಾನ್ ಏನಿರಬಹುದು?

ಪಿಎಂಒ ಇನ್‌ ಕಂಟ್ರೋಲ್ 

ಕಾಶ್ಮೀರದ ರಾಜ್ಯಪಾಲರಾಗಿ ಸತ್ಯಪಾಲ್ ಮಲಿಕ್‌ ಇದ್ದರೂ ಅಲ್ಲಿನ ಮುಖ್ಯ ಕಾರ್ಯದರ್ಶಿ ಮತ್ತು ಭದ್ರತಾ ಸಲಹೆಗಾರರು ರಾಜ್ಯಪಾಲರ ಮಾತು ಕೇಳುತ್ತಿಲ್ಲವಂತೆ. ಅಲ್ಲಿನ ಮುಖ್ಯ ಕಾರ್ಯದರ್ಶಿ ಬಿವಿಆರ್‌ ಸುಬ್ರಹ್ಮಣ್ಯಂ ನೇರವಾಗಿ ಪ್ರಧಾನಿಯ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಜೊತೆಗೆ ಸಂಪರ್ಕದಲ್ಲಿದ್ದರೆ, ರಾಜ್ಯಪಾಲರ ಭದ್ರತಾ ಸಲಹೆಗಾರ ವಿಜಯ ಕುಮಾರ್‌ ನೇರವಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋವಲ್‌ರಿಂದ ಆರ್ಡರ್‌ ತೆಗೆದುಕೊಳ್ಳುತ್ತಿದ್ದಾರೆ. ಅಂದ ಹಾಗೆ ಸತ್ಯಪಾಲ್ ಮಲಿಕ್‌ ಸಂಘ ಪರಿವಾರದವರಲ್ಲ. ಚೌಧರಿ ಚರಣ ಸಿಂಗ್‌ ಜೊತೆಗಿದ್ದ ಸಮಾಜವಾದಿ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ