ಕಲಬುರಗಿ(ಮಾ.06): ಇಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಪ್ರಧಾನಿ ನರೆಂದ್ರ ಮೋದಿ ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ಗುಡುಗಿದರೆ ಹೊರತು ಕಾಂಗ್ರೆಸ್ ಸಂಸದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಚಕಾರವೆತ್ತಿಲ್ಲ. 

ಖರ್ಗೆ ನೆಲದಿಂದಲೇ ರಣ ಕಹಳೆ‌‌ ಮೊಳಗಿಸಲು ಡಾ.ಜಾಧವ ಅವರನ್ನು ಆಪರೇಷನ್ ಕಮಲ‌ ಮೂಲಕ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. 

ಪ್ರಧಾನಿ ಮೋದಿ ಇಂದಿನ ರ್ಯಾಲಿಯಲ್ಲಿ ಜಾಧವ ಅವರನ್ನು ಲೋಕಸಭಾ ಅಭ್ಯರ್ಥಿ ಎಂದು ಹೇಳುವ ಮೂಲಕ ಖರ್ಗೆಗೆ ಸವಾಲು ಹಾಕುತ್ತಾರೆ ಎನ್ನಲಾಗಿತ್ತು.

ಆದರೆ ತಮ್ಮ ಇಡೀ ಭಾಷಣದಲ್ಲಿ ಮೋದಿ ಎಲ್ಲಿಯೂ ಖರ್ಗೆ ಹೆಸರು ಬಳಸಲಿಲ್ಲ. ಕೇವಲ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.