ಬೆಂಗಳೂರು [ಜು.17] :  ರಾಜ್ಯ ರಾಜಕೀಯ ಪ್ರಹಸನ ಬಗ್ಗೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಪ್ರಕಟ ಮಾಡಿದೆ. ಶಾಸಕರಿಗೆ ವಿಶ್ವಾಸಮತಕ್ಕೆ ಒತ್ತಾಯ ಮಾಡುವಂತಿಲ್ಲ ಎಂದು ತಿಳಿಸಿದೆ. ಸುದೀರ್ಘ ವಿಚಾರಣೆ ಬಳಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ತಾವು ಸ್ವಾಗತ ಮಾಡುವುದಾಗಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 

"

ನಾನು ಓರ್ವ ಶಾಸಕನಾಗಿ ನ್ಯಾಯಾಲಯದ ತೀರ್ಪಿಗೆ ಗೌರವ ನೀಡುತ್ತೇವೆ. ಸ್ಪೀಕರ್ ಅಧಿಕಾರ ಏನು ಎನ್ನುವುದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. 

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶಾಸಕರು ಕಲಾಪಕ್ಕೆ ಹೋಗಬಹುದು, ಬಿಡಬಹುದು. ಆದರೆ ನಾನು ನನ್ನ ಶಾಸಕರಿಗೆ ಮನವಿ ಮಾಡುತ್ತೇನೆ.  ಬೇರೆಯವರನ್ನು ನಂಬಿ ಹೋಗಬೇಡಿ.  ನಿಮ್ಮ ಮೇಲೆ ಮಂಗನ ಟೋಪಿ ಹಾಕುತ್ತಾರೆ ಎಂದರು. 

ನಿಮ್ಮನ್ನು ಗೆಲ್ಲಿಸಿರುವ ಜನರ ನೋಡಿ, ನಿಮ್ಮ ಕುಟುಂಬ ನೋಡಿ ಎಂದು ನನ್ನ ಶಾಸಕ ಮಿತ್ರರಿಗೆ ಮನವಿ ಮಾಡುತ್ತೇನೆ ಎಂದು ಡಿಕೆಶಿ ಪರೋಕ್ಷ ವಾರ್ನಿಂಗ್ ನೀಡಿದರು.