ಬೆಂಗಳೂರು[ಸೆ. 26] ಕರ್ನಾಟಕ ಉಪಚುನಾವಣೆಗೆ ಸುಪ್ರೀಂ ತಡೆ ನೀಡಿರುವುದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ವಚನದ ಮೂಲಕ ತಿರುಗೇಟು ನೀಡಿದ್ದಾರೆ.

ಅನರ್ಹ ಶಾಸಕರ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ವಚನವೊಂದರ ಮೂಲಕ ಅನರ್ಹರಿಗೆ ಸರಿಯಾದ ಟಾಂಗ್ ನೀಡಿದ್ದಾರೆ.

"ಕಾಲಲಿ ಕಟ್ಟಿದ ಗುಂಡು
ಕೊರಳಲಿ ಕಟ್ಟಿದ ಬೆಂಡು
ತೇಲಲೀಯದು ಗುಂಡು ಮುಳುಗಲೀಯದು ಬೆಂಡು
ಇಂತಪ್ಪ ಸಂಸಾರಶರಧಿಯ ದಾಂಟಿಸಿ ಕಾಲಾಂತಕನೆ ಕಾಯೋ ಕೂಡಲಸಂಗಮ.

ಅರ್ಹತೆ ಕಳೆದುಕೊಂಡ ಶಾಸಕರ ಪಾಡು ನೋಡಿ ಹೇಳಬೇಕೆನಿಸಿದ್ದು"

ಕುಮಾರಸ್ವಾಮಿ ಅವರ ಕೊಟ್ಟಿರುವ ಟಾಂಗ್ ಅರ್ಥ ಹುಡುಕುತ್ತ ಹೋಗುವ ಬದಲು ಟಾಂಗ್ ನೀಡಿದ್ದಾರೆ ಎಂದಷ್ಟೇ ಹೇಳಬಹುದು.