ವಿ.ಕೆ.ಶಶಿಕಲಾ ಹಾಗೂ ಇತರ ಅಪರಾಧಿಗಳಾದ ವಿ.ಎನ್. ಸುಧಾಕರನ್ ಮತ್ತು ಜೆ.ಎಳವರಸಿಯವರೂ ತಲಾ ರೂ.10 ಕೋಟಿ ದಂಡವನ್ನು ಪಾವಾತಿಸಬೇಕಾಗಿರುವುದರಿಂದ ಅವರ ಆಸ್ತಿ ಹಾಗೂ ಬ್ಯಾಂಕ್ ಖಾತೆಗಳನ್ನು ಕೂಡಾ ಮುಟ್ಟುಗೋಲು ಹಾಕಲು ಕೋರ್ಟ್ ಆದೇಶಿಸಿದೆ.

ನವದೆಹಲಿ (ಫೆ.15): ಜಯಾಲಲಿತಾ ಜೈಲುಶಿಕ್ಷೆಯಿಂದ ಪಾರಾಗಿರಬಹುದು, ಆದರೆ ಅವರ ಆಸ್ತಿ ಹಾಗೂ ಬ್ಯಾಂಕ್ ಖಾತೆಗಳಿಗೆ ನ್ಯಾಯವ್ಯವಸ್ಥೆಯಿಂದ ಪಾರಾಗಲು ಸಾಧ್ಯವಾಗಲಿಲ್ಲ.

Add Asianetnews Kannada as a Preferred SourcegooglePreferred

ವಿಚಾರಣಾ ನ್ಯಾಯಾಲಯವು ವಿಧಿಸಿರುವ ರೂ.100 ಕೋಟಿ ದಂಡವನ್ನು ವಸೂಲು ಮಾಡುವ ನಿಟ್ಟಿನಲ್ಲಿ ಜಯಾಲಲಿತಾ ಆಸ್ತಿ ಹಾಗೂ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ವಿ.ಕೆ.ಶಶಿಕಲಾ ಹಾಗೂ ಇತರ ಅಪರಾಧಿಗಳಾದ ವಿ.ಎನ್. ಸುಧಾಕರನ್ ಮತ್ತು ಜೆ.ಎಳವರಸಿಯವರೂ ತಲಾ ರೂ.10 ಕೋಟಿ ದಂಡವನ್ನು ಪಾವಾತಿಸಬೇಕಾಗಿರುವುದರಿಂದ ಅವರ ಆಸ್ತಿ ಹಾಗೂ ಬ್ಯಾಂಕ್ ಖಾತೆಗಳನ್ನು ಕೂಡಾ ಮುಟ್ಟುಗೋಲು ಹಾಕಲು ಕೋರ್ಟ್ ಆದೇಶಿಸಿದೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ವಿ.ಕೆ. ಶಶಿಕಲಾ, ಅವರ ಬಂಧುಗಳಾದ ಇಳವರಸಿ ಹಾಗೂ ಸುಧಾಕರನ್‌ಗೆ ಸುಪ್ರೀಂಕೋರ್ಟ್ 4 ವರ್ಷ ಜೈಲು ಶಿಕ್ಷೆ ವಿಸಿ ಮಂಗಳವಾರ ತೀರ್ಪು ನೀಡಿದೆ. ಜಯಾ ಅವರು ಮೃತಪಟ್ಟಿರುವುದರಿಂದ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಕೈಬಿಟ್ಟಿದೆ.