ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ಕಲ್ಕತ್ತ ನ್ಯಾಯಮೂರ್ತಿ ಸಿ. ಎಸ್ ಕರ್ನನ್’ರವರ ಮಾನಸಿಕ ಆರೋಗ್ಯ ಪರಿಶೀಲಿಸಲು ಸುಪ್ರೀಂಕೋರ್ಟ್ ವೈದ್ಯಕೀಯ ಮಂಡಳಿಯನ್ನು (ಮೆಡಿಕಲ್ ಬೋರ್ಡ್) ರಚಿಸಿದೆ.
ನವದೆಹಲಿ (ಮೇ.01): ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ಕಲ್ಕತ್ತ ನ್ಯಾಯಮೂರ್ತಿ ಸಿ. ಎಸ್ ಕರ್ನನ್’ರವರ ಮಾನಸಿಕ ಆರೋಗ್ಯ ಪರಿಶೀಲಿಸಲು ಸುಪ್ರೀಂಕೋರ್ಟ್ ವೈದ್ಯಕೀಯ ಮಂಡಳಿಯನ್ನು (ಮೆಡಿಕಲ್ ಬೋರ್ಡ್) ರಚಿಸಿದೆ.
ಮೇ 4 ರಂದು ವೈದ್ಯಕೀಯ ಮಂಡಳಿಯು ನ್ಯಾ.ಕರ್ನನ್ ರವರನ್ನು ಪರೀಕ್ಷಿಸಲಿದೆ. ಈ ಮಂಡಳಿಗೆ ಸಹಾಯ ಮಾಡುವಂತೆ ಪೊಲೀಸ್ ಅಧಿಕಾರಿಗಳ ತಂಡವನ್ನು ರಚಿಸುವಂತೆ ಪಶ್ಚಿಮ ಬಂಗಾಳ ಡಿಜಿಪಿಗೆ ಸುಪ್ರೀಂಕೋರ್ಟ್ ಸೂಚಿಸಿದೆ.
ನ್ಯಾ. ಕರ್ನನ್ ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವುದರಿಂದ ಫೆ.8 ರ ನಂತರ ಅವರು ನೀಡಿದ ತೀರ್ಪನ್ನು ಪಾಲಿಸದಂತೆ ದೇಶದ ಎಲ್ಲಾ ಅಧಿಕಾರಿಗಳಿಗೂ ಸುಪ್ರೀಂಕೋರ್ಟ್ ಸೂಚಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸುವಂತೆ ಕರ್ನನ್ ರವರಿಗೆ ಕೇಳಿಕೊಂಡಿದ್ದು, ಒಂದು ವೇಳೆ ಪ್ರತಿಕ್ರಿಯಿಸದಿದ್ದರೆ ಈ ವಿಚಾರದ ಬಗ್ಗೆ ಏನೂ ಹೇಳುವುದಿಲ್ಲವೆಂದು ಕೋರ್ಟ್ ಭಾವಿಸುತ್ತದೆ ಎಂದಿದೆ.
