Asianet Suvarna News Asianet Suvarna News

ಕಟ್ಟಡ ಕಾರ್ಮಿಕರನ್ನು ಸಂಘಟಿತ ವಲಯಕ್ಕೆ ಸೇರಿಸಿ: ಸುಪ್ರೀಂ

ದೇಶದಲ್ಲಿರುವ 4 ಕೋಟಿಗಿಂತ ಹೆಚ್ಚಿರುವ ಕಟ್ಟಡ ನಿರ್ಮಾಣದ ಕೂಲಿ ಕೆಲಸಗಾರರನ್ನು ಸಾಮಾನ್ಯ ವಲಯದ ಕಾರ್ಮಿಕರನ್ನಾಗಿ ಪರಿಗಣಿಸಿ, ಇತರೆ ನೌಕರರಿಗೆ ನೀಡಲಾಗುತ್ತಿರುವ ಸಾಮಾಜಿಕ ಸೌಲಭ್ಯವನ್ನು ಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸಲಹೆ ನೀಡಿದೆ.

Supreme Court Give Suggestion To Union Govt

ನವದೆಹಲಿ: ದೇಶದಲ್ಲಿರುವ 4 ಕೋಟಿಗಿಂತ ಹೆಚ್ಚಿರುವ ಕಟ್ಟಡ ನಿರ್ಮಾಣದ ಕೂಲಿ ಕೆಲಸಗಾರರನ್ನು ಸಾಮಾನ್ಯ ವಲಯದ ಕಾರ್ಮಿಕರನ್ನಾಗಿ ಪರಿಗಣಿಸಿ, ಇತರೆ ನೌಕರರಿಗೆ ನೀಡಲಾಗುತ್ತಿರುವ ಸಾಮಾಜಿಕ ಸೌಲಭ್ಯವನ್ನು ಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸಲಹೆ ನೀಡಿದೆ.

ಈ ಮೂಲಕ ಕಟ್ಟಡ ಕೂಲಿ ಕಾರ್ಮಿಕರು ಸಹ ಗೌರವಯುತ ಜೀವನ ನಡೆಸಲು ಅಗತ್ಯವಿರುವ ಶಿಕ್ಷಣ, ವೈದ್ಯಕೀಯ, ಸಾಮಾಜಿಕ ಭದ್ರತೆ, ಹೆಣ್ಣು ಮಕ್ಕಳಿಗೆ ಹೆರಿಗೆ ರಜೆ, ಪಿಎಫ್‌ ಮತ್ತು ಕನಿಷ್ಠ ವೇತನ ಸೌಲಭ್ಯ ಕಲ್ಪಿಸುವಂತೆಯೂ ಸೂಚಿಸಲಾಗಿದೆ ಕೇಂದ್ರಕ್ಕೆ ಸುಪ್ರೀಂ ಸೂಚಿಸಿದೆ.

ಈ ಬಗ್ಗೆ ಸೋಮವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಮದನ್‌ ಬಿ.ಲೋಕೂರ್‌ ಮತ್ತು ದೀಪಕ್‌ ಗುಪ್ತ ನೇತೃತ್ವದ ಪೀಠ, ಕಟ್ಟಡ ಕೂಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಮನಹರಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು.

ಹಲವು ವರ್ಷಗಳಿಂದ ಸೆಸ್‌ ಮೂಲಕ 37400 ಕೋಟಿ ರು. ಸರ್ಕಾರ ಆದಾಯ ಗಳಿಸಿದೆ. ಆದರೆ, ಇದರಲ್ಲಿ 9500 ಕೋಟಿ ರು. ಖರ್ಚು ಮಾಡಿದ್ದು, ಬಾಕಿ 28000 ಕೋಟಿ ರು. ಅನ್ನು ಬಳಸಿಕೊಳ್ಳಬೇಕಿದೆ. ದೇಶದಲ್ಲಿ ಒಟ್ಟು 4 ಕೋಟಿ ಕಟ್ಟಡ ಕೂಲಿ ಕಾರ್ಮಿಕರಿದ್ದು, ಇದರಲ್ಲಿ 1.5 ಕೋಟಿ ಮಂದಿ ಮಾತ್ರ ನೋಂದಣಿಯಾಗಿದ್ದಾರೆ ಎಂದು ಸುಪ್ರೀಂ ಹೇಳಿತು.

Latest Videos
Follow Us:
Download App:
  • android
  • ios