ಅನರ್ಹ ಶಾಸಕರ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ| ಸುಮಾರು ಒಂದುವರೆ ಗಂಟೆ ವಾದ ಮಂಡಿಸಿದ ಮುಕುಲ್ ರೋಹಟಗಿ| ಬಳಿಕ ಅನರ್ಹ ಶಾಸಕ ಸುಧಾಕರ್ ಪರ ವಕೀಲರ ವಾದ ಶುರು|
ನವದೆಹಲಿ, (ಸೆ.25): ಕಾಂಗ್ರೆಸ್-ಜೆಡಿಎಸ್ 17 ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮತ್ತೆ ಮುಂದೂಡಿದೆ.
ಇಂದು ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠ, ಭೋಜನ ವಿರಾಮ ನಂತರ 2 ಗಂಟೆಗೆ ವಿಚಾರಣೆ ಮುಂದೂಡಿದೆ.
ನನ್ನ ಕ್ಷೇತ್ರಕ್ಕೆ ಬೈ ಎಲೆಕ್ಷನ್ ನಡೆಯಲ್ಲ: ಸುಪ್ರೀಂ ತೀರ್ಪು ಮುಂಚೆ ಅನರ್ಹ ಶಾಸಕ ಅಚ್ಚರಿ ಹೇಳಿಕೆ
ಇದಕ್ಕೂ ಮುನ್ನ ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಅನರ್ಹ ಶಾಸಕರ ಪರ ಮುಕುಲ್ ರೋಹಟಗಿ ವಾದ ಆರಂಭಿಸಿದ್ದು, ಸುಮಾರು ಒಂದುವರೆ ಗಂಟೆಗಳ ಕಾಲ ಬಲವಾದ ವಾದ ಮಂಡನೆ ಮಾಡಿದರು. ಅನೇಕ ವಿಚಾರಗಳನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟು ತಮ್ಮ ವಾದ ಮೊಟಕುಗೊಳಿಸಿದರು. ರೋಹಟಗಿ ವಾದ ಮುಗಿಯುತ್ತಿದ್ದಂತೆಯೇ ಇದೀಗ ಚಿಕ್ಕಬಳ್ಳಾಪುರ ಕಾಂಗ್ರೆಸ್ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಪರ ವಕೀಲ ಸುದಂರಂ ಅವರ ವಾದ ಮಂಡನೆ ಶುರುವಾಗಿದೆ. ಊಟದ ವಿರಾಮದ ಬಳಿಕ ಸುದಂರಂ ಅವರು ತಮ್ಮ ವಾದ ಮುಂದುವರಿಸಲಿದ್ದಾರೆ.
ರೋಹಟಗಿ ವಾದದ ಹೈಲೆಟ್ಸ್
* ಸ್ಪೀಕರ್ ಕಾನೂನು ವ್ಯಾಪ್ತಿ ಮೀರಿದ್ದು, ಕಾನೂನು ಬಾಹೀರ ತೀರ್ಮಾನ ಕೈಗೊಂಡಿದ್ದಾರೆ. ಶಾಸಕರ ರಾಜೀನಾಮೆ ಅವರ ವೈಯಕ್ತಿಕ . ಅದನ್ನು ಪ್ರಶ್ನಿಸುವ ಅಧಿಕಾರ ಸ್ಪೀಕರ್‌ಗೆ ಇಲ್ಲ.
* ಸರ್ಕಾರ ಅಂದ್ರೆ ಸ್ಕೂಲ್ ಅಲ್ಲಾ? ಸ್ಪೀಕರ್ ಹೆಡ್ ಮಾಸ್ಟರ್ ಅಲ್ಲ. ಸರ್ಕಾರ ಇರಬೇಕೋ ಬೇಡವೋ ಎನ್ನುವುದನ್ನು ಸದನದ ಸದಸ್ಯರು ನಿರ್ಧರಿಸುತ್ತಾರೆ.
* ಉಮೇಶ್ ಜಾಧವ್ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿರುವುದನ್ನು ವಿವರಿಸಿದ ರೋಹಟಗಿ, ಜಾಧವ್ ಅನರ್ಹತೆ ಬಗ್ಗೆ ಸ್ಪೀಕರ್ ಯೋಚಿಸಿಯೇ ಇಲ್ಲ. ಉಮೇಶ್ ಜಾಧವ್‌ಗೆ ಒಂದು ನ್ಯಾಯ ಇವರಿಗೆ ಒಂದು ನ್ಯಾಯ ಅಂದ್ರೆ ಹೇಗೆ? ಎಂದು ರೋಹಟಗಿ ವಾದ ಮಂಡಿಸಿದರು.
