ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಿಜೆಪಿ ನಾಯಕರೇ ಇತ್ತೀಚಿಗೆ ಮಾತನಾಡುತ್ತಿದ್ದಾರೆ. ಕಳೆದ ವಾರ ಯಶವಂತ್ ಸಿನ್ಹಾ ಮೋದಿ ವಿರುದ್ದ ಮಾತನಾಡಿ ಸುದ್ಧಿಯಾಗಿದ್ದರು. ಇಂದು ಮಾಜಿ ಬಿಜೆಪಿ ಸಚಿವ ಅರುಣ್ ಶೌರಿ ಮಾತನಾಡಿದ್ದಾರೆ. ಮೋದಿಯವರಿಗೆ ಬೆಂಬಲ ನೀಡಿ ತಪ್ಪು ಮಾಡಿದೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ನವದೆಹಲಿ (ಅ.06): ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಿಜೆಪಿ ನಾಯಕರೇ ಇತ್ತೀಚಿಗೆ ಮಾತನಾಡುತ್ತಿದ್ದಾರೆ. ಕಳೆದ ವಾರ ಯಶವಂತ್ ಸಿನ್ಹಾ ಮೋದಿ ವಿರುದ್ದ ಮಾತನಾಡಿ ಸುದ್ಧಿಯಾಗಿದ್ದರು. ಇಂದು ಮಾಜಿ ಬಿಜೆಪಿ ಸಚಿವ ಅರುಣ್ ಶೌರಿ ಮಾತನಾಡಿದ್ದಾರೆ. ಮೋದಿಯವರಿಗೆ ಬೆಂಬಲ ನೀಡಿ ತಪ್ಪು ಮಾಡಿದೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ನಾನು ಸಾಕಷ್ಟು ತಪ್ಪು ಮಾಡಿದ್ದೇನೆ. ಅದರಲ್ಲೂ ವಿ ಕೆ ಸಿಂಗ್ ಹಾಗೂ ಮೋದಿಯವರಿಗೆ ಬೆಂಬಲ ನೀಡಿ ದೊಡ್ಡ ತಪ್ಪು ಮಾಡಿದ್ದೇನೆ ಎಂದು ವ್ಯಂಗ್ಯವಾಡಿದ್ದಾರೆ.
ಅಧಿಕಾರಕ್ಕೆ ಬಂದ ತಕ್ಷಣ ಬದಲಾಗುವ ನಾಯಕರನ್ನು ನಂಬಬೇಡಿ. ಮೋದಿಯವರು ತಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಮಾತನಾಡುತ್ತಾ, ಕುಸಿಯುತ್ತಿರುವ ಆರ್ಥಿಕ ಅಭಿವೃದ್ಧಿ ದರ ಹಾಗೂ ಹೆಚ್ಚಾಗುತ್ತಿರುವ ನಿರುದ್ಯೋಗದ ಬಗ್ಗೆ ವಿಮರ್ಶಾತ್ಮಕವಾಗಿ ಮಾತನಾಡಿದ್ದಾರೆ.
