ಬೆಂಗಳೂರು [ಆ.15] : ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ ಒಂದು ತಿಂಗಳು ಕಳೆಯುತ್ತಾ ಬಂದಿದೆ. ಆದರೂ ಕೂಡ ಸಂಪುಟ ವಿಸ್ತರಣೆಯಾಗದ ಕಾರಣ ಮಂತ್ರಿಗಿರಿಗಾಗಿ ಲಾಬಿ ಜೋರಾಗಿದೆ. 

ಗುರುಮಠಕಲ್ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಬಾಬೂರಾವ್ ಚಿಂಚನಸೂರ್ ಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಬೆಂಬಲಿಗರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾಲಿಗೆ ಬಿದ್ದಿದ್ದಾರೆ.  

ನಮ್ಮ ನಾಯಕನಿಗೆ ಸಚಿವ ಸ್ಥಾನ ಕೊಡಿ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೂ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ.  ಮಲ್ಲಿಕಾರ್ಜುನ ಖರ್ಗೆ ಸೋಲಿಸಲು ಕೂಡ ಇವರ ಪಾತ್ರ ಮಹತ್ವದ್ದಾಗಿದೆ. ಆದ್ದರಿಂದ ಮಂತ್ರಿ ಸ್ಥಾನ ನೀಡಬೇಕು. ಈ ಹಿಂದೆ ನೀಡಿದ ಭರವಸೆಯನ್ನು ಈಡೇರಿಸಬೇಕು ಎಂದು ಕೇಳಿದರು. 

ಮಾಜಿ ಶಾಸಕರಾದ ಚಿಂಚನಸೂರ್ ಅವರಿಗೆ MLC ಸ್ಥಾನ ನೀಡುವ ಮೂಲಕ ಸಚಿವ ಸ್ಥಾನ ನೀಡಲು ಕೇಳಿಕೊಂಡಿದ್ದಾರೆ. 

BSY ಸಂಪುಟ ಸೇರ್ತಾರಾ ಅನರ್ಹ ಶಾಸಕ ?

ಕೊಟ್ಟ ಮಾತನ್ನು ಉಳಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಕಾಲಿಗೆ ಬೀಳುವ ಮೂಲಕ ಯಡಿಯೂರಪ್ಪಗೆ ಚಿಂಚನಸೂರು ಬೆಂಬಲಿಗರು ಮನವಿ ಮಾಡಿದರು. 

10 ಕೋಟಿ ಕೊಟ್ಟರೆ ಗ್ರಾಮಕ್ಕೆ ದಾನಿ ಹೆಸರು : BSY

ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ನೀವು ಈ ಬಗ್ಗೆ ಬಂದು ಕೇಳುವ ಅಗತ್ಯವಿಲ್ಲ. ಈ ವಿಚಾರವನ್ನು ನಮ್ಮ ರಾಷ್ಟ್ರೀಯ ಅಧ್ಯಕ್ಷರಿಗೆ ತಿಳಿಸುತ್ತೇನೆ. ನನ್ನ ಪ್ರಯತ್ನ ನಾನು ಮಾಡುತ್ತೇನೆ ಎಂದು ಚಿಂಚನಸೂರು ಬೆಂಬಲಿಗರಿಗೆ ಬಿ ಎಸ್ ವೈ ಭರವಸೆ ನೀಡಿದರು.