ಸನ್ನಿಲಿಯೋನ್ ಇದಾವುದರ ಬಗ್ಗೆಯೂ ಗಮನ ನೀಡಲಿಲ್ಲ. ಮಗುವಿನ ಬಣ್ಣ, ಹಿನ್ನಲೆ, ಆರೋಗ್ಯ ಸ್ಥಿತಿಗತಿ ವಿಚಾರಿಸದೇ ಮಗುವನ್ನು ದತ್ತು ಸ್ವೀಕರಿಸಿದ್ದರು

ನವದೆಹಲಿ(ಆ.04): ಬಾಲಿವುಡ್ ನಟಿ ಸನ್ನಿಲಿಯೋನ್ ಕಳೆದ ತಿಂಗಳು ದತ್ತು ಸ್ವೀಕರಿಸಿದ್ದ ಬಾಲಕಿಯನ್ನು ೧೧ ಪೋಷಕರು ತಿರಸ್ಕರಿಸಿದ್ದರು ಎಂದು ಚೈಲ್ಡ್ ಅಡಾಪ್ಷನ್ ರಿಸೋರ್ಸ್ ಏಜೆನ್ಸಿ (ಸಿಎಆರ್) ತಿಳಿಸಿದೆ. ಸಾಮಾನ್ಯವಾಗಿ ಮಗುವನ್ನು ದತ್ತು ಸ್ವೀಕರಿಸುವ ಪೋಷಕರು ತಾವು ದತ್ತು ಸ್ವೀಕರಿಸುವ ಮಗುವಿನ ದೈಹಿಕ ಆಕರ್ಷಣೆ, ಚರ್ಮದ ಬಣ್ಣ ಮತ್ತು ವೈದ್ಯಕೀಯ ಇತಿಹಾಸವನ್ನು ಗಮನಿಸುತ್ತಾರೆ. ಆದರೆ, ಸನ್ನಿಲಿಯೋನ್ ಇದಾವುದರ ಬಗ್ಗೆಯೂ ಗಮನ ನೀಡಲಿಲ್ಲ. ಮಗುವಿನ ಬಣ್ಣ, ಹಿನ್ನಲೆ, ಆರೋಗ್ಯ ಸ್ಥಿತಿಗತಿ ವಿಚಾರಿಸದೇ ಮಗುವನ್ನು ದತ್ತು ಸ್ವೀಕರಿಸಿದ್ದರು ಎಂದು ಸಿಎಆರ್ ಸಿಇಒ ದೀಪಕ್ ಕುಮಾರ್ ತಿಳಿಸಿದ್ದಾರೆ.