ಮಂಗಳೂರು (ಸೆ.27): ಕಳೆದ ಭಾನುವಾರ ಕುಕ್ಕೆಸುಬ್ರಮಣ್ಯದ ಕುಮಾರಧಾರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ದೇವದಾಸ್​ ಶೆಟ್ಟಿ ಪಂಜ ಸಮೀಪ ಪತ್ತೆಯಾಗಿದೆ.

ದೇವದಾಸ್​ ಶೆಟ್ಟಿ ದೇಹ ಪತ್ತೆಹಚ್ಚಲು ಅಗ್ನಿಶಾಮಕ ಸಿಬ್ಬಂದಿ ನದಿಯಲ್ಲಿ ಭಾನುವಾರದಿಂದ ಶೋಧ ಕಾರ್ಯ ನಡೆಸುತ್ತಿದ್ದರು. ಈ ವೇಳೆ ​ಶೆಟ್ಟಿ ಶವ ಪಂಜ ಸಮೀಪ ಪತ್ತೆಯಾಗಿದೆ.

ಚಿಲ್ಲರೆ ವಿಚಾರವಾಗಿ ಮಹಿಳಾ ಪ್ರಯಾಣಿಕಳೊಬ್ಬಳ ಜತೆ ನಡೆದ ವಿವಾದದಿಂದ ಬೇಸತ್ತು ಮಂಗಳೂರಲ್ಲಿ ಕಂಡಕ್ಟರ್​ ನದಿಗೆ ಹಾರಿ ಸಾವನ್ನಪ್ಪಿದ್ದರು.

ಪ್ರತಿಭಟನೆ:

ದೇವದಾಸ್ ಶೆಟ್ಟಿ ಆತ್ಮಹತ್ಯೆ ಘಟನೆಯ ಹಿನ್ನೆಲೆಯಲ್ಲಿ ಸರ್ಕಾರಿ ಕಾರ್ಮಿಕ ‌ವಿಭಾಗ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕೆಎಸ್ಆರ್‌ಟಿಸಿ ಬಸ್ಸು ನಿಲ್ದಾಣ ಮುಂಬಾಗದಲ್ಲಿ ನೂರಾರು ಕಂಡಕ್ಟರ್’ಗಳು​ ಸೇರಿ ಪ್ರತಿಭಟನೆ ನಡೆಸಿದರು.

ಆತ್ಮಹತ್ಯೆಗೆ‌ ಕಾರಣರಾದವರನ್ನು ತಕ್ಷಣ ಬಂಧಿಸುವಂತೆ ನೌಕರರು ಆಗ್ರಹಿಸಿದ್ದಾರೆ.