‘ಸ್ಟೈಲ್ ರಾಜ’ ಸಿನಿಮಾದ ನಿರ್ದೇಶಕ ಹರೀಶ್ ಮತ್ತು ಅವರ ತಂಡವನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಜು.30): ‘ಸ್ಟೈಲ್ ರಾಜ’ ಸಿನಿಮಾದ ನಿರ್ದೇಶಕ ಹರೀಶ್ ಮತ್ತು ಅವರ ತಂಡವನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೊಲೆಯತ್ನ ಆರೋಪದಡಿ ನಿರ್ದೇಶಕ ಹರೀಶ್, ರಾಜಶೇಖರ್, ಸತೀಶ್, ಸುರೇಶ್’ರವರನ್ನು ಬಂಧಿಸಲಾಗಿದೆ. ಹಣಕಾಸಿನ ವಿಚಾರವಾಗಿ ಅಶೋಕ್ ಎಂಬುವನನ್ನು ಕೊಲೆ ಮಾಡಲು ಹರೀಶ್ ರೌಡಿಗಳಿಗೆ ಸುಪಾರಿ ನೀಡಿದ್ದರು ಎನ್ನಲಾಗಿದೆ.
‘ಸ್ಟೈಲ್ರಾಜ’ ಸಿನಿಮಾ ನಟನ ಅತ್ತೆ ಮಗಳ ಬಳಿ ನಿರ್ದೇಶಕ ಹರೀಶ್ 2.5 ಲಕ್ಷ ಸಾಲ ಮಾಡಿದ್ದರು. ಸಿನಿಮಾ ಬಿಡುಗಡೆ ಬಳಿಕ ಹಣ ನೀಡುವಂತೆ ನಾಯಕನ ಅತ್ತೆ ಮಗಳ ಪರವಾಗಿ ಅಶೋಕ್ ಹಣ ಕೇಳಿದ್ದ. ಕೊಟ್ಟ ಹಣವನ್ನು ಪದೆ ಪದೆ ಕೇಳಿದಕ್ಕೆ ಅಶೋಕ್’ನನ್ನು ಕೊಲೆ ಮಾಡಲು ರೌಡಿ ಸತೀಶ್ & ಟೀಂಗೆ 2 ಲಕ್ಷ ಸುಪಾರಿ ಕೊಟ್ಟಿದ್ದ ನಿರ್ದೇಶಕ ಹರೀಶ್. ರೌಡಿ ಸತೀಶ್ & ಟೀಂ 2 ದಿನದ ಹಿಂದೆ ಅನ್ನಪೂರ್ಣೇಶ್ವರಿ ನಗರದ ಬಳಿ ಅಶೋಕ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಅನ್ನಪೂರ್ಣೆಶ್ವರಿ ನಗರ ಪೊಲೀಸ್ ಠಾಣೆಗೆ ಅಶೋಕ್ ದೂರು ನೀಡಿದ್ದು ಪ್ರಕರಣ ಸಂಬಂಧ ನಿರ್ದೇಶಕ ಹರೀಶ್ ಸೇರಿ ನಾಲ್ವರನ್ನು ಬಂಧಿಸಲಾಗಿದೆ.
