ಈ ವರ್ಷ ಶಾಲಾ ಮಕ್ಕಳಿಗೆ ಶೂ ಭಾಗ್ಯವಿಲ್ಲ. ವರ್ಷ ಮುಗೀತಾ ಬಂದ್ರೂ ಇನ್ನೂ ಟೆಂಡರ್ ಭಾಗ್ಯ ಬಂದಿಲ್ಲ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಶೂ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಹೀಗಾಗಿ ಕಳೆದ ವರ್ಷದ ಶೂನಲ್ಲೇ ವರ್ಷ ಸಾಗಹಾಕಿದೆ ರಾಜ್ಯ ಸರ್ಕಾರ.

ಬೆಂಗಳೂರುಡಿ.09): ಈ ವರ್ಷ ಶಾಲಾ ಮಕ್ಕಳಿಗೆ ಶೂ ಭಾಗ್ಯವಿಲ್ಲ. ವರ್ಷ ಮುಗೀತಾ ಬಂದ್ರೂ ಇನ್ನೂ ಟೆಂಡರ್ ಭಾಗ್ಯ ಬಂದಿಲ್ಲ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಶೂ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಹೀಗಾಗಿ ಕಳೆದ ವರ್ಷದ ಶೂನಲ್ಲೇ ವರ್ಷ ಸಾಗಹಾಕಿದೆ ರಾಜ್ಯ ಸರ್ಕಾರ.

ಮಾರ್ಚ್​ ನಂತರ ಹೊಸ ಶೂ ವಿತರಣೆ

ಶಾಲಾ ಮಕ್ಕಳಿಗೆ ಕಾಲಿಗೆ ಚೆಂದ, ಸಮಾನತೆ ಮನೋಭಾವ ಬೆಳೆಸಲು ಎಲ್ಲರಿಗೂ ಶೂ ವಿತರಣೆಗೆ ರಾಜ್ಯ ಸರ್ಕಾರ ಕಳೆದ ವರ್ಷ ಶೂ ಭಾಗ್ಯ ಯೋಜನೆ ಜಾರಿಗೊಳಿಸಿತು. ಕಳೆದ ವರ್ಷ ನೀಡಬೇಕಿದ್ದ ಬೂಟುಗಳನ್ನು ಸರ್ಕಾರ ಈ ವರ್ಷ ಜೂನ್ ತಿಂಗಳಲ್ಲಿ ನೀಡಿದೆ. ಹೀಗಾಗಿ, 2016-17 ನೇ ಸಾಲಿನ ಶೂಗಳನ್ನು ಇನ್ನೂ ನೀಡಿಲ್ಲ. ಅಲ್ಲದೇ ಈ ಶೈಕ್ಷಣಿಕ ವರ್ಷದಲ್ಲಿ ನೀಡದಿರಲು ಕೂಡ ಸರ್ಕಾರ ನಿರ್ಧರಿಸಿದೆ. ಕಳೆದ ವರ್ಷ ಶಾಲೆಗಳಿಗೆ ನೇರವಾಗಿ ಶೂ ಖರೀದಿಸಲು ಅವಕಾಶ ಕಲ್ಪಿಸಲಾಗಿತ್ತು. ಎಸ್​ಡಿಎಂಸಿ ಮೂಲಕ ಮಕ್ಕಳಿಗೆ ಬೂಟ್ ಖರೀದಿಗೆ ಸರ್ಕಾರ ನೇರವಾಗಿ ಹಣ ಬಿಡುಗಡೆ ಮಾಡಿತ್ತು. ಆದರೆ, ಆ ಯೋಜನೆಯಿಂದ ಸಾಕಷ್ಟು ಅವ್ಯವಹಾರದ ದೂರುಗಳು ಬಂದಿತ್ತು. ಹೀಗಾಗಿ ಯೋಜನೆ ಬದಲಾಯಿಸಿ ಈ ವರ್ಷ ಟೆಂಡರ್ ಮೂಲಕ ಬೂಟ್ ಖರೀದಿಗೆ ಸರ್ಕಾರ ತೀರ್ಮಾನ ಮಾಡಿದೆ.

ಹೊಸ ನಿಯಮ ಏನು? 

- 45 ಲಕ್ಷ ಮಕ್ಕಳಿಗೆ ಶೂ ವಿತರಣೆ

- 127 ಕೋಟಿ ರೂಪಾಯಿ ಯೋಜನೆ

- ಒಂದು ಕಂಪನಿಗೆ 3 ಲಕ್ಷ ಶೂ ಉತ್ಪಾದನೆಗೆ ಅವಕಾಶ

- ತಯಾರಿಕಾ ಕಂಪನಿ 50 ಲಕ್ಷ ಬ್ಯಾಂಕ್ ಗ್ಯಾರೆಂಟಿ ಕೊಡಬೇಕು

- ಒಂದು ವರ್ಷದ ಗ್ಯಾರೆಂಟಿ ಕೊಡಬೇಕು

- ಮಕ್ಕಳ ಕಾಲಿನ ಅಳತೆಯನ್ನು ಕಂಪನಿಯವರೇ ಪಡೆಯಬೇಕು

- ಬೂಟ್ ಹಾಳಾದರೆ 24 ಗಂಟೆಯಲ್ಲಿ ಬದಲಾಯಿಸಿ ಕೊಡಬೇಕು

ಸರ್ಕಾರ ಟೆಂಡರ್ ಕರೆಯಲು ಹೊಸ ನಿಯಮಗಳನ್ನು ರೂಪಿಸುವುದರಲ್ಲೇ ಇನ್ನು ಮೀನಮೇಷ ಎಣಿಸುತ್ತಿದೆ. ಇದೇ ಲೆಕ್ಕಚಾರದಲ್ಲಿ 2016-17 ನೇ ಸಾಲಿನ ಬಜೆಟ್​ನಲ್ಲಿ ನೀಡಬೇಕಿದ್ದ ಶೂ ನೀಡದೇ ಸರ್ಕಾರ ಜಾರಿಕೊಳ್ಳುತ್ತಿದೆ. ಆದ್ದರಿಂದ ಈ ವರ್ಷ ಮಕ್ಕಳಿಗೆ ಸಿಗಬೇಕಾಗಿದ್ದ ಶೂ ಸಿಗದೇ ಮಕ್ಕಳು ಕಳೆದ ವರ್ಷದ ಬೂಟು ಹಾಕಿಕೊಂಡೆ ಶಾಲೆಗೆ ಹೋಗಬೇಕಾಗಿದೆ.