ಬಸ್ಸಿನಲ್ಲಿ ಯುವತಿ ಎದುರು ಹಸ್ತಮೈಥುನ ಮಾಡಿ ಲೈಂಗಿಕ ಕಿರುಕುಳ ನೀಡಿದ ಕಾಮುಕ.ಮುಂದೆ ನಡೆದಿದ್ದೇ ಬೇರೆ.

ನವದೆಹಲಿ, [ನ.21]: ಬಸ್ಸಿನಲ್ಲಿ ಯುವತಿ ಎದುರು ಹಸ್ತಮೈಥುನ ಮಾಡಿ ಲೈಂಗಿಕ ಕಿರುಕುಳ ನೀಡಿದ ಕಾಮುಕನನ್ನು ಇಂದು [ಬುಧವಾರ] ದೆಹಲಿ ಪೊಲೀಸರು ಬಂಧಿಸಿದ್ದಾರೆ.

ದಕ್ಷಿಣ ದೆಹಲಿಯ ಕಪಶೇಡದಿಂದ ವಸಂತ್ ಕುಂಜ್ ಮಾರ್ಗದ ಬಸ್‍ನಲ್ಲಿ ಕಾಮುಕ ಸಾರ್ವಜನಿಕರ ಎದುರಲ್ಲೇ ಯುವತಿ ಮುಂದೆ ಪ್ಯಾಂಟ್ ಬಿಚ್ಚಿ ಹಸ್ತಮೈಥುನ ಮಾಡಿದ್ದಾನೆ. 

ಸ್ನೇಹಿತೆಯ ಪಾರ್ಟಿಗೆ ಬಂದ ಯುವತಿಯನ್ನ ಹಿಂಡಿ ಸಿಪ್ಪೆ ಮಾಡಿದ ಕಾಮುಕರು..!

ವ್ಯಕ್ತಿ ಪದೇ ಪದೇ ಅದೇ ರೀತಿ ಕೆಟ್ಟದಾಗಿ ವರ್ತಿಸುವುದನ್ನು ನೋಡಿದ ಯುವತಿಯ ಪಿತ್ತ ನೆತ್ತಿಗೇರಿದೆ. ಬಳಿಕ ಆ ವ್ಯಕ್ತಿಗೆ ಹಿಗ್ಗಾಮುಗ್ಗ ಥಳಿಸಿ, ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಕಾಮುಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಸ್ಸಿನಲ್ಲಿ ವ್ಯಕ್ತಿ ದುರ್ವರ್ತನೆ ತೋರುತ್ತಿದ್ದರೂ ಯಾರೊಬ್ಬರೂ ಸಹಾಯಕ್ಕೆ ಬಂದಿಲ್ಲ ಎಂದು ಯುವತಿ ಅಸಮಧಾನ ವ್ಯಕ್ತಪಡಿಸಿದ್ದಾಳೆ.