ನವದೆಹಲಿ (ನ.07): ಸ್ನೇಹಿತೆಯ ಪಾರ್ಟಿಗೆ ಬಂದ 21 ವರ್ಷದ ಯುವತಿಗೆ ಜ್ಯೂಸ್​ನಲ್ಲಿ ಮತ್ತು ಬರುವ ಮಾತ್ರೆ ಹಾಕಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ದೆಹಲಿಯ ಅಶೋಕ ನಗರದಲ್ಲಿ ನಡೆದಿದೆ.

ಅಪಾರ್ಟ್​ಮೆಂಟ್​ಗೆ ಕರೆದುಕೊಂಡು ಹೋದ ಯುವಕರು ಯುವತಿಗೆ ಹಲ್ಲೆ ಮಾಡಿ, ವಿಡಿಯೋ ಮಾಡಿದ್ದಾರೆ.  ಈ ವಿಷಯ ಹೊರಗಡೆ ತಿಳಿಸಿದರೆ, ವಿಡಿಯೋ ಲೀಕ್​ ಮಾಡುವುದಾಗಿ ಬೆದರಿಸಿದ್ದಾರೆ. ಆದರೂ ಯುವತಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. 

ಗೆಳತಿ ಪಾರ್ಟಿಗಾಗಿ ನನ್ನನ್ನು ಕರೆದಿದ್ದಳು. ಆದ್ದರಿಂದ ನಾನು ಅಲ್ಲಿಗೆ ತೆರಳಿದ್ದೆ. ಈ ವೇಳೆ ಮೂವರು ಯುವಕರು ನನ್ನನ್ನು ಯಾರು ಇಲ್ಲದ ಖಾಲಿ ಅಪಾರ್ಟ್​ ಮೆಂಟ್​ಗೆ ಕರೆದುಕೊಂಡು ಹೋಗಿ ಈ ಕೃತ್ಯ ನಡೆಸಿದರು. ಬಳಿಕ ಆ ಪಾರ್ಟ್​ಮೆಂಟ್​ನಲ್ಲಿ ನನ್ನನ್ನ ಒಬ್ಬಂಟಿಯಾಗಿ ಬಿಟ್ಟು ಹೋದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆರೋಪಗಳ ಬಂಧನ ಪೊಲೀಸರು ಬಲೆ ಬೀಸಿದ್ದಾರೆ.