ರಾತ್ರಿ ಆಗಸದಲ್ಲಿ ಕಂ ಅಚ್ಚರಿಯ ಬೆಳಕಿಗೆ ಬೆದರಿದ ಊರ ಜನ| ಚಲನೆ ಇಲ್ಲದ ಬೃಹತ್ ಗಾತ್ರದ ಬೆಳಕು ಕಂಡು ದಂಗಾದ ಜನತೆ| ಸಾಮಾಜಿಕ ಜಾಲತಾಣಗಳಲ್ಲಿ ಈ ಬೆಳಕಿನ ವಿಡಿಯೋ ವೈರಲ್|ಕ್ಯಾಲಿರ್ಫೋನಿಯಾ ಆಗಸದಲ್ಲಿ ಕಂಡು ಬಂತು ಅಚ್ಚರಿಯ ಬೆಳಕು| ಉರಿದು ಬೂದಿಯಾದ ಕ್ಷುದ್ರಗ್ರಹ ಇರಬೆಬಹುದೆಂಬ ಅನುಮಾನ

ಕ್ಯಾಲಿಫೋರ್ನಿಯಾ(ಡಿ.21): ಈ ಜಗತ್ತು ಅದೆಷ್ಟು ವಿಸ್ಮಯವೋ ಆಗಸ ಕೂಡ ಅಷ್ಟೇ ವಿಸ್ಮಯ. ಅಸಂಖ್ಯಾತ ರಹಸ್ಯಗಳನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿರುವ ದಿಗಂತದಲ್ಲಿ ದಿನಕ್ಕೊಂದರಂತೆ ಅಚ್ಚರಿಯ ಘಟನಾವಳಿಗಳು ನಡೆಯುತ್ತಲೇ ಇರುತ್ತವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
Scroll to load tweet…

ಅದರಂತೆ ಕ್ಯಾಲಿಫೋರ್ನಿಯಾದಲ್ಲಿ ಮಾನವ ಈ ಹಿಂದೆಂದೂ ಕಂಡಿರದಂತ ವಿಸ್ಮಯ ಘಟನೆಯೊಂದು ನಡೆದಿದೆ. ನಗರದ ರಾತ್ರಿ ಆಗಸದಲ್ಲಿ ವಿಚಿತ್ರ ಬೆಳಕೊಂದು ಕಂಡಿದ್ದು, ಯಾವುದೇ ಚಲನೆ ಇಲ್ಲದ ಈ ಬೆಳಕನ್ನು ಕಂಡು ಜನರು ದಂಗಾಗಿದ್ದಾರೆ.

Scroll to load tweet…

ಕ್ಯಾಲಿಫೋರ್ನಿಯಾ ಆಗಸದಲ್ಲಿ ಅತ್ಯಂತ ಸ್ಪಷ್ಟವಾಗಿ ಮತ್ತು ಬೃಹತ್ ಗಾತ್ರದಲ್ಲಿ ಕಂಡ ಈ ಬೆಳಕನ್ನು ಕಂಡು ಜನ ಗಾಬರಿಗೊಂಡಿದ್ದಾರೆ. ಆದರೆ ಈ ಬೆಳಕು ಏನು ಎಂಬುದು ಯಾರಿಗೂ ಅರ್ಥವಾಗಿಲ್ಲ.

Scroll to load tweet…

ಆಗಸದಲ್ಲಿ ಕಂಡ ಈ ಅಚ್ಚರಿಯನ್ನು ಜನ ತಮ್ಮ ಫೇಸ್‌ಬುಕ್ ಮತ್ತು ಟ್ವಿಟ್ಟರ್‌ಗಳಲ್ಲಿ ಶೇರ್ ಮಾಡುತ್ತಿದ್ದಾರೆ. ಇನ್ನು ರಾಷ್ಟ್ರೀಯ ಹವಾಮಾನ ಸೇವೆ ಇಲಾಖೆ ಇದೊಂದು ಉರಿದು ಬೂದಿಯಾದ ಕ್ಷುದ್ರಗ್ರಹ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದೆ.

Scroll to load tweet…