ಮುಂಬೈ:  21ನೇ ಶತಮಾನವನ್ನು ಸಂಪೂರ್ಣವಾಗಿ ಸಾಮಾಜಿಕ ಜಾಲತಾಣಗಳು ತಮ್ಮ ಹಿಡಿತಕ್ಕೆ ಪಡೆದುಕೊಂಡಿವೆ. ಅದರಲ್ಲಿ ನಿತ್ಯ ಲಕ್ಷಾಂತರ ಸಂದೇಶಗಳು  ಹರಿದಾಡುತ್ತಿರುತ್ತದೆ. ಅದರಲ್ಲಿ ಸತ್ಯಾಸತ್ಯತೆಗಳ ಬಗ್ಗೆ ಯಾರೂ ಕೂಡ ಗಮನಹರಿಸುವ ಗೋಜಿಗೆ ಹೋಗುವುದಿಲ್ಲ. ಇದೀಗ ಇಂತಹದ್ದೆ ಒಂದು ಸಂದೇಶ  ಫುಲ್ ವೈರಲ್ ಆಗಿದೆ. 

ಸೋನಾಲಿ ಬೇಂದ್ರೆ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ.  ಸ್ತನ ಕ್ಯಾನ್ಸರ್ ಗೆ ಬೇಸಿಗೆಯಲ್ಲಿ ಕಪ್ಪು ಬಣ್ಣದ ಬ್ರಾ  ಧರಿಸುವುದೇ ಕಾರಣ ಎನ್ನುವ ಸಂದೇಶ ಎಲ್ಲೆಡೆ ಹರಿದಾಡುತ್ತಿದೆ. 

ಅಲ್ಲದೇ ಇದನ್ನು ಸ್ವತಃ ಟಾಟಾ ಕ್ಯಾನ್ಸರ್ ಇನ್ಸ್ ಸ್ಟಿಟ್ಯೂಟ್ ನಿಂದಲೇ ಹೇಳಲಾಗಿದೆ ಎಂದು ವಾಟ್ಸಾಪ್ ಗಳಲ್ಲಿ ಹರಿದಾಡುತ್ತಿದೆ. ಆದರೆ ನಟಿ ಸೋನಾಲಿ ಬೇಂದ್ರೆ ಬಳಲುತ್ತಿರುವುದು ಮೆಟಾಸ್ಟೇಸೈಜಡ್ ಕ್ಯಾನ್ಸರ್ ಎಂದು ಹೇಳಿಕೊಂಡಿದ್ದರು. 

ಆದರೆ ಇದೀಗ ವಾಟ್ಸಾಪ್ ಗಳಲ್ಲಿ ಮಾತ್ರ ಆಕೆ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎನ್ನುವ ಸುಳ್ಳು ಸುದ್ದಿ ವೈರಲ್ ಆಗುತ್ತಿದೆ. ಕಪ್ಪು ಬಣ್ಣ ಹೆಚ್ಚಿನ ಯುವಿ ಕಿರಣಗಳನ್ನು ಹೀರಿಕೊಳ್ಳುತ್ತದೆ. ಆದರೆ ಈ ಬಗ್ಗೆ ಯಾವುದೇ ಸಂಶೋಧನೆಯೂ ಕೂಡ ಇದುವರೆಗೆ ಸಾಬೀತು ಮಾಡಿಲ್ಲ. ಅನೇಕ ಸುಳ್ಳು ಸುದ್ದಿಗಳಂತೆ ಈ ಸುದ್ದಿಯು ಇದೀಗ ಸಾಮಾಜಿಕ ಜಾಲತಾಣಿಗರಿಂದ ಫಾರ್ವರ್ಡ್ ಆಗುತ್ತಿದೆ.