ನವದೆಹಲಿ[ಫೆ.21]: ದೇಶದ ಅತಿ ವೇಗದ ರೈಲು ‘ವಂದೇ ಭಾರತ’ ಎಕ್ಸ್‌ಪ್ರೆಸ್‌ಗೆ ದುಷ್ಕರ್ಮಿಗಳು ಮತ್ತೆ ಕಲ್ಲು ಎಸೆದಿದ್ದಾರೆ.

ಕೆಟ್ಟು ನಿಂತ ಭಾರತದ ಅತಿ ವೇಗದ ರೈಲು: ಏನಾಗಿತ್ತು?

‘ವಂದೇ ಭಾರತ’ ಎಕ್ಸ್‌ಪ್ರೆಸ್‌ ರೈಲು ಪ್ರಾಯೋಗಿಕ ಹಂತದಲ್ಲಿ ಇದ್ದಾಗಲೂ ಕಲ್ಲೆಸೆತದ ಪ್ರಕರಣಗಳು ನಡೆದಿದ್ದವು. ಈಗ ನಡೆದಿರುವುದು ಎರಡು ತಿಂಗಳಲ್ಲಿನ ಮೂರನೇ ಕಲ್ಲೆಸೆತದ ಪ್ರಕರಣ. ದೆಹಲಿ ಮತ್ತು ಆಗ್ರಾ ಮಧ್ಯದಲ್ಲಿ ಸಂಚರಿಸುವ ಈ ಟ್ರೇನ್‌ಗೆ ತುಂಡ್ಲಾ ಎಂಬ ಪ್ರದೇಶದಲ್ಲಿ ಈ ಕಲ್ಲೆಸೆಯಲಾಗಿದ್ದು, ಕಿಟಕಿಯ ಗಾಜು ಒಡೆದಿದೆ.

ಅತೀ ವೇಗದ ರೈಲು ಬಿಡೋದು ಹೇಗೆ? ತೋರಿಸಿಕೊಟ್ಟ ಕಾಂಗ್ರೆಸ್ ಅಧ್ಯಕ್ಷ!

ರೈಲಿಗೆ ಬೈಕ್‌ ಡಿಕ್ಕಿ: ಈ ನಡುವೆ, ಇದೇ ತುಂಡ್ಲಾ ಬಳಿ ಅಕ್ರಮವಾಗಿ ಬೈಕ್‌ ಮೇಲೆ ಹಳಿ ದಾಟುತ್ತಿದ್ದ ವ್ಯಕ್ತಿಯೊಬ್ಬ ವಂದೇ ಭಾರತ ಎಕ್ಸ್‌ಪ್ರೆಸ್‌ ಕಂಡು ಬೈಕನ್ನು ಹಳಿ ಮೇಲೇ ಬಿಟ್ಟು ಓಡಿ ಹೋಗಿದ್ದಾನೆ. ಆಗ ರೈಲು ಬೈಕ್‌ಗೆ ಡಿಕ್ಕಿ ಹೊಡದಿದೆ. ರೈಲಿಗೆ ಯಾವುದೇ ಹಾನಿ ಆಗಿಲ್ಲ.

ಕಲ್ಲೆಸೆದ ಮಕ್ಕಳಿಗೆ ಚಾಕೋಲೇಟ್‌!: ಇನ್ನು ಘಟನೆ ನಡೆದ ಸ್ಥಳಗಳಲ್ಲಿ ರೈಲ್ವೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಕಲ್ಲೆಸೆದವರು ಹಳಿ ಬಳಿ ಮನೆಯಿರುವ ಚಿಕ್ಕಮಕ್ಕಳು ಎಂಬುದು ಗಮನಕ್ಕೆ ಬಂದಿದೆ. ಹೀಗಾಗಿ ಅವರಿಗೆ ದಂಡಿಸುವ ಬದಲು ಚಾಕೋಲೆಟ್‌, ಮಿಠಾಯಿ, ಗೊಂಬೆಗಳು ಮತ್ತು ಬಣ್ಣದ ಪೆನ್ಸಿಲ್‌ಗಳನ್ನು ನೀಡುವ ಮೂಲಕ ಮನಗೆಲ್ಲುವ ಪ್ರಯತ್ನ ನಡೆಸಲಾಯಿತು ಎಂದು ರೈಲ್ವೇ ಉತ್ತರ ವಲಯ ವಕ್ತಾರ ದೀಪಕ ಕುಮಾರ್‌ ತಿಳಸಿದ್ದಾರೆ.