ನವದೆಹಲಿ(ಫೆ.16): ನಿನ್ನೆಯಷ್ಟೇ ಉದ್ಘಾಟನೆ ಭಾಗ್ಯ ಭಾರತದ ಮೊದಲ ಅತಿ ವೇಗದ ‘ವಂದೇ ಭಾರತ್’ ಎಕ್ಸ್‌ಪ್ರೆಸ್ ರೈಲಿನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ.

ವಾರಣಾಸಿಯಿಂದ ಬರುತ್ತಿದ್ದ ರೈಲು ತುಂಡ್ಲಾ ಜಂಕ್ಷನ್‌ನಿಂದ 15 ಕಿಲೋ ಮೀಟರ್ ದೂರದಲ್ಲಿ ಕೆಟ್ಟು ನಿಂತಿದೆ. ಚಕ್ರಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ರೈಲ್ವೇ ಇಲಾಖೆ ಮಾಹಿತಿ ನೀಡಿದೆ.

ರೈಲು ಹಳಿಯಲ್ಲಿ ಹಸುಗಳು ಓಡಾಡುತ್ತಿದ್ದಾಗ ಚಕ್ರ ಜಾರಿ ಈ ಘಟನೆ ನಡೆದಿದೆ. ಎಂಜಿನಿಯರ್‌ಗಳು ಈ ಬಗ್ಗೆ ತಪಾಸಣೆ ನಡೆಸುತ್ತಾರೆ ಎಂದು ಉತ್ತರ ರೈಲ್ವೆ ವಿಭಾಗದ ಸಿಪಿಆರ್‌ಒ ದೀಪಕ್ ಕುಮಾರ್ ತಿಳಿಸಿದ್ದಾರೆ.