Asianet Suvarna News Asianet Suvarna News

ಅತೀ ವೇಗದ ರೈಲು ಬಿಡೋದು ಹೇಗೆ? ತೋರಿಸಿಕೊಟ್ಟ ಕಾಂಗ್ರೆಸ್ ಅಧ್ಯಕ್ಷ!

  • ಟ್ವಿಟರ್‌ನಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿರುವ ಕೇಂದ್ರ ರೈಲ್ವೇ ಸಚಿವ ಹೈಸ್ಪೀಡ್ ರೈಲಿನ ಟ್ವೀಟ್
  • ಪಿಯೂಷ್ ಗೋಯಲ್ ಕಾಲೆಳೆದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂ ರಾವ್
Dinesh Gundu Rao Pinches Piyush Goyal Over High Speed Train Video
Author
Bengaluru, First Published Feb 11, 2019, 7:15 PM IST
  • Facebook
  • Twitter
  • Whatsapp

ಬೆಂಗಳೂರು: ಕೇಂದ್ರ ರೈಲ್ವೇ ಸಚಿವ ಹಾಕಿರುವ ಪೋಸ್ಟ್, ಟ್ವಿಟರಿಗರ ಟ್ರೋಲ್‌ಗೆ ಆಹಾರವಾದ ಬೆನ್ನಲ್ಲೇ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡಾ  ಪಿಯೂಷ್ ಗೋಯಲ್ ಕಾಲೆಳೆದಿದ್ದಾರೆ.

ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಚಲಿಸುತ್ತಿರುವ ವಿಡಿಯೋವನ್ನು ಟ್ವೀಟ್ ಮಾಡಿದ್ದ ಪಿಯೂಷ್ ಗೋಯಲ್, ‘ಇದು ಹಕ್ಕಿ... ಇದು ವಿಮಾನ.. ಮೇಕ್ ಇನ್ ಇಂಡಿಯಾ ಅಡಿಯಲ್ಲಿ ನಿರ್ಮಿಸಲಾದ ಸೆಮಿ ಹೈ-ಸ್ಪೀಡ್ ರೈಲು ಮಿಂಚಿನ ವೇಗದಲ್ಲಿ ಚಲಿಸುತ್ತದೆ’ ಎಂದು ಟ್ವೀಟ್ ಮಾಡಿದ್ದರು. 

ಬಿಜೆಪಿಯ ಇತರ ನಾಯಕರೂ ಆ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಅದು ವೈರಲ್ ಆಗಿತ್ತು.  

ಇದನ್ನೂ ಓದಿ: 'ಹುಷಾರ್....! ನನ್ನ ಕ್ಷೇತ್ರದಲ್ಲಿ ಜಾತಿ ವಿಚಾರ ಎತ್ತಿದ್ರೆ ಸುಮ್ನಿರಲ್ಲ'

ಅಭಿಶೇಕ್ ಜೈಸ್ವಾಲ್ ಎಂಬಾತ, ತಾನು ರೆಕಾರ್ಡ್ ಮಾಡಿದ್ದ ಮೂಲ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ಸಚಿವರು ಪೋಸ್ಟ್ ಮಾಡಿದ್ದ ವಿಡಿಯೋ ತಿರುಚಲಾಗಿದ್ದು ಎಂದು ವಾದಿಸಿದ್ದ. 

ಆ ಬಳಿಕ ರೈಲ್ವೇ ಸಚಿವರ ಆ ಟ್ವೀಟ್ ವ್ಯಾಪಕ ಟೀಕೆಗೆ ಗುರಿಯಾಗಿತ್ತು. 

ಈಗ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡಾ ಕೇಂದ್ರ ಸಚಿವರ ಕಾಲೆಳೆದಿದ್ದಾರೆ.

ಅತೀ ವೇಗದ ರೈಲನ್ನು ತಯಾರಿಸುವುದು ಹೇಗೆ? ಚಲಿಸುತ್ತಿರುವ ರೈಲಿನ ವಿಡಿಯೋವನ್ನು ಫಾಸ್ಟ್ ಫಾರ್ವರ್ಡ್ ಮೋಡ್‌ನಲ್ಲಿ ಹಾಕಿ ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿದರೆ ಸಾಕು! ಎಂದು ಕುಹುಕವಾಡಿದ್ದಾರೆ. 
 

 

(ಸಾಂದರ್ಭಿಕ ಚಿತ್ರ] 

Follow Us:
Download App:
  • android
  • ios