ನವದೆಹಲಿ[ಆ.28]: ಆರ್ಥಿಕತೆಗೆ ಉತ್ತೇಜನ ನೀಡುವ ಸಲುವಾಗಿ ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ)ನಲ್ಲಿರುವ 1.76 ಲಕ್ಷ ಕೋಟಿ ರು. ಹೆಚ್ಚುವರಿ ನಿಧಿಯನ್ನು ಪಡೆಯುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹರಿಹಾಯ್ದಿದ್ದಾರೆ. ಅದನ್ನು ಕಳ್ಳತನಕ್ಕೆ ಹೋಲಿಸಿ ಟ್ವೀಟ್‌ ಮಾಡಿದ್ದಾರೆ.

ಸ್ವಯಂ ಸೃಷ್ಟಿಸಿದ ಆರ್ಥಿಕ ವಿಪತ್ತನ್ನು ಹೇಗೆ ಬಗೆಹರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಗೊತ್ತಾಗುತ್ತಿಲ್ಲ. ರಿಸವ್‌ರ್‍ ಬ್ಯಾಂಕ್‌ನಿಂದ ಹಣ ಕದಿಯುವುದು ಕೆಲಸಕ್ಕೆ ಬರುವುದಿಲ್ಲ. ಇದೊಂದು ರೀತಿ ಗುಂಡೇಟಿನಿಂದ ಆದ ಗಾಯಕ್ಕೆ ಔಷಧ ಅಂಗಡಿಯಿಂದ ಬ್ಯಾಂಡ್‌ ಏಡ್‌ ಕದ್ದು ಅಂಟಿಸಿದಂತೆ ಎಂದು ಕಿಡಿಕಾರಿದ್ದಾರೆ.

ಆರ್‌ಬಿಐನ 1.76 ಲಕ್ಷ ಕೋಟಿ ಕೇಂದ್ರಕ್ಕೆ!

ಮತ್ತೊಂದೆಡೆ ಮೋದಿ ಸರ್ಕಾರ ಆರ್‌ಬಿಐ (ರಿಸವ್‌ರ್‍ ಬ್ಯಾಂಕ್‌)ನಲ್ಲಿರುವ ಮೊದಲ ಅಕ್ಷರ ‘ಆರ್‌’ ಅನ್ನು ‘ರಿಸವ್‌ರ್‍’ ಬದಲು ‘ರಾರ‍ಯವೇಜ್ಡ್‌’ (ಹಾಳು ಮಾಡು) ಎಂದು ಪರಿವರ್ತಿಸಿದೆ ಎಂದು ಕಾಂಗ್ರೆಸ್‌ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಕಿಡಿಕಾರಿದ್ದಾರೆ.