ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡಲಾಗುವುದು ಎಂದು ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಬೆಂಗಳೂರು (ಜೂ.14): ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡಲಾಗುವುದು ಎಂದು ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಬಸವಣ್ಣನವರ ಹೆಸರನ್ನು ಗುಲ್ಬರ್ಗಾ ವಿವಿಗೆ ನಾಮಕರಣ ಮಾಡಲು ಚಿಂತನೆ ನಡೆಸಲಾಗಿದೆ. ಗುಲ್ಬರ್ಗಾ ವಿವಿಗೆ ಜಗಜ್ಯೋತಿ ಬಸವಣ್ಣ ವಿಶ್ವ ವಿದ್ಯಾಲಯ , ಗುಲ್ಬರ್ಗಾದ ಕೇಂದ್ರೀಯ ವಿವಿಗೆ ಡಾ.ಅಂಬೇಡ್ಕರ್ ಹೆಸರು ನಾಮಕರಣ ಮಾಡುವ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಕೇಂದ್ರದ ಒಪ್ಪಿಗೆ ಬಂದ ಬಳಿಕ ನಾಮಕರಣಕ್ಕೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಹೇಳಿದ್ದಾರೆ.

ಪ್ರಮಾಣ ವಚನ ಸ್ವೀಕಾರ ಬಳಿಕ ತೋರಿಕೆಗಾಗಿ ಬಸವಣ್ಣನ ಮೂರ್ತಿಗೆ ಮಾಲಾರ್ಪಣೆ ಮಾಡಿಲ್ಲ.. ಎಲ್ಲಾ ಸಮುದಾಯದವರಿಗೆ ಅನ್ವಯಿಸುವಂತ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ. ಮೌಢ್ಯ ಬಿತ್ತುವವರು ಬಸವಣ್ಣನ ತತ್ವಗಳಿಗೆ ವಿರುದ್ಧವಾಗಿ ನಡೆದುಕೊಂಡಂತೆ. ಸ್ವರ್ಗ ಮತ್ತು ನರಕ ನಮ್ಮ ಸೃಷ್ಟಿಯಷ್ಟೇ. ಮಾನವೀಯತೆಯಿಂದ ಬದುಕು ಸಾಗಿಸುವುದೇ ಸ್ವರ್ಗ. ಹಿಂದೆ ಮುಂದೆ ಯೋಚಿಸದೆ ಸಚಿವರ ಮನವಿಯಂತೆ ಬಸವಣ್ಣನವರ ಭಾವಚಿತ್ರ ಕಡ್ಡಾಯಕ್ಕೆ ಆದೇಶಿಸಿದೆ. ಯಾರನ್ನೋ ಮೆಚ್ಚಿಸಲು ಸರ್ಕಾರದಿಂದ ಆದೇಶ ಹೊರಡಿಸಿಲ್ಲ. ಬಸವಣ್ಣ ಮನುಕುಲ ಮತ್ತು ವಿಶ್ವದ ಆಸ್ತಿಯಿದ್ದಂತೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಿಲ್ಲದೆ ಮಹಿಳಾ ವಿವಿಗೆ ಅಕ್ಕಮಹಾದೇವಿ ವಿವಿ ನಾಮಕರಣಕ್ಕೆ ತೀರ್ಮಾನಿಸಲಾಗಿದೆ ಎಂದು ಸಿಎಂ ಹೇಳಿದ್ದಾರೆ.