Asianet Suvarna News Asianet Suvarna News

ರಾಜ್ಯದಲ್ಲಿ ಮತ್ತೆ 15 ಶಾಸಕರ ರಾಜೀನಾಮೆ ಎಚ್ಚರಿಕೆ

ರಾಜ್ಯ ರಾಜಕೀಯದಲ್ಲಿ ಪ್ರಹಸನ ನಡೆಯುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ಎಚ್ಚರಿಕೆ ನೀಡಲಾಗಿದೆ. ಮತ್ತೆ 15 ಶಾಸಕರ ರಾಜೀನಾಮೆ ವಾರ್ನಿಂಗ್ ರವಾನೆಯಾಗಿದೆ. 

ST Resarvation Issue Prasnnannadpuri Swamiji Warns Govt
Author
Bengaluru, First Published Jul 14, 2019, 8:20 AM IST
  • Facebook
  • Twitter
  • Whatsapp

ಹರಿಹರ/ದಾವಣಗೆರೆ [ಜು.14]: ನಾಯಕ ಸಮಾಜಕ್ಕೆ ಶಿಕ್ಷಣ, ಉದ್ಯೋಗದಲ್ಲೂ ಶೇ.7.5 ಮೀಸಲಾತಿ ಸಿಗಬೇಕೆಂಬ ಬೇಡಿಕೆ ಈಡೇರಲೇಬೇಕು. ಈ ಬಗ್ಗೆ ವಿಳಂಬ ಮಾಡಿದರೆ ನಮ್ಮ ಸಮುದಾಯದ 15 ಶಾಸಕರೂ ತಮ್ಮ ಶಾಸಕತ್ವಕ್ಕೆ ಪಕ್ಷಾತೀತವಾಗಿ ರಾಜೀನಾಮೆ ನೀಡಲಿದ್ದಾರೆ ಎಂದು ರಾಜನಹಳ್ಳಿ ಶ್ರೀವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದ ಪುರಿ ಸ್ವಾಮೀಜಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. 

ಹರಿಹರ ತಾಲೂಕು ರಾಜನಹಳ್ಳಿ ಗ್ರಾಮದ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ ಶನಿವಾರ ನಾಯಕ ಸಮಾಜ ಜನ ಜಾಗೃತಿ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸರ್ಕಾರ ಯಾವುದೇ ಇರಲಿ. 

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನೆರೆಡು ತಿಂಗಳಲ್ಲೇ ನಮ್ಮ ಬೇಡಿಕೆ ಈಡೇರಬೇಕು. ಸಮ್ಮಿಶ್ರ ಸರ್ಕಾರ ಕೇಳಿದ್ದ 2 ತಿಂಗಳ ಕಾಲಾವಧಿಯಲ್ಲೇ ಕೇಂದ್ರಮಾದರಿಯಲ್ಲಿ ಪರಿಶಿಷ್ಟಪಂಗಡಕ್ಕೆ ಶೇ.7.5 ಮೀಸಲಾತಿ ನೀಡಬೇಕು ಎಂದರು. ಒಂದು ವೇಳೆ ನೀಡದಿದ್ದರೆ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಈ ಮೂರೂ ಪಕ್ಷಗಳ ಶಾಸಕರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಮತ್ತೆ ಸರ್ಕಾರದ ವಿರುದ್ಧ ತೀವ್ರ ಸ್ವರೂಪದ ಹೋರಾಟಕ್ಕಿಳಿಯುತ್ತೇವೆ ಎಂದರು.

Follow Us:
Download App:
  • android
  • ios