ಮಗಳ ಎಸ್'ಎಸ್'ಎಲ್'ಸಿ ಪರೀಕ್ಷೆಗೆಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ತಾಯಿ ಆತ್ಮಹತ್ಯೆ

First Published 23, Mar 2018, 10:19 PM IST
SSLC Student Mother Suicide
Highlights

ಇಂದು ಮಗಳ SSLC ಪರೀಕ್ಷೆ ಹಿನ್ನೆಲೆ ನಿನ್ನೆ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದರು.

ಬೆಳಗಾವಿ(ಮಾ.23): ಮಗಳ ಎಸ್'ಎಸ್'ಎಲ್'ಸಿ ಪರೀಕ್ಷೆಗೆಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ತಾಯಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದ ಆಶ್ರಯ ನಗರದಲ್ಲಿ ನಡೆದಿದೆ.

ಪ್ರೇಮಾ ತೋಟಗಿ ಮೃತ ದುರ್ದೈವಿ. ಕಳೆದ ಹಲವು ದಿನಗಳ ಹಿಂದೆ ಕ್ಷುಲ್ಲಕ ಕಾರಣಕ್ಕೆ ಮೃತ ಪ್ರೇಮಾ ತೋಟಗಿ ಕುಟುಂಬ ಮತ್ತು ಸ್ಥಳಿಯ ಆರೇಳು ಕುಟುಂಬಗಳ ಮದ್ಯೆ ಜಗಳವಾಗಿತ್ತು. ಅದೇ ಜಗಳದಲ್ಲಿ ಗಾಯಾಳುವಾಗಿದ್ದ ಪ್ರೇಮಾ ಬೈಲಹೊಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಇಂದು ಮಗಳ SSLC ಪರೀಕ್ಷೆ ಹಿನ್ನೆಲೆ ನಿನ್ನೆ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದರು. ಪ್ರೇಮಾ ಮನೆಗೆ ಹೋದ ಮೇಲೆ ಮತ್ತೆ ಜಗಳ ತೆಗೆದ ಅಲ್ಲಿಯ ಸ್ಥಳಿಯರು ಪ್ರೇಮಾ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಮಾನಸಿಕ ಹಿಂಸೆ ನೀಡಿದ್ದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಾಯಿಯ ಸಾವಿನ ಆಘಾತದಿಂದ ಪರೀಕ್ಷೆಗೆ ಹಾಜರಾಗದೇ ಮಗಳು ಕಣ್ಣಿರಿನಲ್ಲಿ ಕೈತೊಳೆಯುವಂತಾಗಿದೆ.

loader