ತಂದೆ ಸಾವಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿನಿಗೆ 80% ಅಂಕ

SSLC Student got 80 Percent Who Wrote a Exam Inspite of Her Father Death
Highlights

ಮದ್ದೂರು ತಾಲೂಕಿನ ದೇಶಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯಾಗಿರುವ ದರ್ಶಿನಿ, ವಿಜ್ಞಾನ ವಿಷಯದ ಪರೀಕ್ಷೆಯ ದಿನ ತಂದೆ ತ್ಯಾಗರಾಜು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು.

ಮಂಡ್ಯ[ಮೇ.07]: ತಂದೆ ಸಾವಿನ ನಡುವೆಯೂ ಎಸ್ಎಸ್ಎಲ್’ಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಯೊಬ್ಬಳು ಶೇ.80 ಅಂಕ ಗಳಿಸಿ ಸಾಧನೆ ಮಾಡಿದ್ದಾಳೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಾಮನಹಳ್ಳಿ  ಗ್ರಾಮದ ತ್ಯಾಗರಾಜು ಎಂಬುವವರ ಮಗಳಾದ ದರ್ಶಿನಿ ಎಸ್ಎಸ್ಎಲ್’ಸಿ ಪರೀಕ್ಷೆಯಲ್ಲಿ 500 ಅಂಕ ಗಳಿಸಿದ್ದಾಳೆ. ಮದ್ದೂರು ತಾಲೂಕಿನ ದೇಶಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯಾಗಿರುವ ದರ್ಶಿನಿ, ವಿಜ್ಞಾನ ವಿಷಯದ ಪರೀಕ್ಷೆಯ ದಿನ ತಂದೆ ತ್ಯಾಗರಾಜು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಆದರೂ ಪರೀಕ್ಷೆ ಬರೆಯುವಂತೆ ಸಂಬಂಧಿಕರು ಧೈರ್ಯ ತುಂಬಿ ಪರೀಕ್ಷೆ ಬರೆಯಲು ಕಳಿಸಿದ್ದರು. ಅದೇ ದಿನ ತೀವ್ರ ಹೃದಯಾಘಾತದಿಂದ ತ್ಯಾಗರಾಜು ಮೃತಪಟ್ಟಿದ್ದರು.
ಇದನ್ನೂ ಓದಿ: ತಂದೆಯ ಸಾವಿನ ನಡುವೆಯೂ ಎಸ್’ಎಸ್’ಎಲ್’ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿ
ದರ್ಶಿನಿ ಒಟ್ಟು 500 ಅಂಕ ಗಳಿಸಿದ್ದು, ಕನ್ನಡ 123, ಇಂಗ್ಲಿಷ್ 95, ಹಿಂದಿ 82, ಗಣಿತ 54, ವಿಜ್ಞಾನ 71, ಸಮಾಜ ವಿಜ್ಞಾನ 75 ಅಂಕ ಪಡೆದಿರುತ್ತಾಳೆ.

loader