ಎಸ್’ಎಸ್’ಎಲ್’ಸಿ ಪರೀಕ್ಷಾ ಸ್ಕ್ವಾಡ್’ಗೆ ಹೃದಯಾಘಾತ

First Published 23, Mar 2018, 12:44 PM IST
SSLC Squad Heart Attack
Highlights

ಎಸ್’ಎಸ್’ಎಲ್’ಸಿ  ಪರೀಕ್ಷೆಗೆ ಬಂದಿದ್ದ ಸಿಟ್ಟಿಂಗ್ ಸ್ಕ್ವಾಡ್’ಗೆ ಹೃದಯಾಘಾತವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಹಾವೇರಿ (ಮಾ.23): ಎಸ್’ಎಸ್’ಎಲ್’ಸಿ  ಪರೀಕ್ಷೆಗೆ ಬಂದಿದ್ದ ಸಿಟ್ಟಿಂಗ್ ಸ್ಕ್ವಾಡ್’ಗೆ ಹೃದಯಾಘಾತವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಹಾವೇರಿ ತಾಲೂಕಿನ ಗುತ್ತಲ ಪಟ್ಟಣದ R K ಇಂಗ್ಲಿಷ್ ಮೀಡಿಯಂ ಸ್ಕೂಲಲ್ಲಿ ಈ ಘಟನೆ ನಡೆದಿದೆ.  ಎಚ್ ಎಚ್ ಕೊರವರ 57 ಎನ್ನುವ ಶಿಕ್ಷಕರು ಮೃತಪಟ್ಟಿದ್ದಾರೆ.  ಎಸ್’ಎಸ್’ಎಲ್’ಸಿ ಗುತ್ತಲ ಪರಿಕ್ಷಾ ಕೇಂದ್ರಕ್ಕೆ  ಸ್ಕ್ವಾಡ್ ಆಗಿ ತೆರಳಿದ್ದ ವೇಳೆ ಪರೀಕ್ಷಾ ಕೊಠಡಿಯಲ್ಲೇ  ಹೃದಯಾಘಾತವಾಗಿದೆ. ಇವರು ವರದಹಳ್ಳಿ ಪ್ರೌಢಶಾಲಾ ಮುಖ್ಯೊಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದರು. 

ಗುತ್ತಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 
 

loader