20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಬಾರಿ ಒಂದಿಲ್ಲೊಂದು ವಿಷಯದಲ್ಲಿ ಶೇ.100 ಅಂಕ ಪಡೆದಿದ್ದಾರೆ. ಈ ವಿಚಾರದಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಇದರ ಪ್ರಮಾಣದಲ್ಲಿ ಸುಮಾರು 3 ಸಾವಿರದಷ್ಟು ಏರಿಕೆಯಾಗಿದೆ. ಇನ್ನು, ಶಾಲೆಯ ವಿಚಾರಕ್ಕೆ ಬಂದರೆ 924 ಶಾಲೆಗಳು ನೂರು ಪ್ರತಿಶತದಷ್ಟು ಫಲಿತಾಂಶ ಪಡೆದಿವೆ. 60 ಶಾಲೆಗಳು ಶೂನ್ಯ ಸಂಪಾದನೆ ಮಾಡಿವೆ. ಕಳೆದ ವರ್ಷ 1,560 ಶಾಲೆಗಳು ಶೇ.100, ಹಾಗೂ 60 ಶಾಲೆಗಳು ಸೊನ್ನೆ ಫಲಿತಾಂಶ ಪಡೆದಿದ್ದವು.

ಬೆಂಗಳೂರು(ಮೇ 12): ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಬಾರಿ 67.87% ಫಲಿತಾಂಶ ಬಂದಿದೆ. ಕಳೆದ 7 ವರ್ಷಗಳಲ್ಲಿ ಇದು ಅತ್ಯಂತ ಕಳಪೆ ಫಲಿತಾಂಶವಾಗಿದೆ. 2009-2010ರ ಸಾಲಿನಲ್ಲಿ ಶೇ. 66.81 ಫಲಿತಾಂಶ ಬಂದಿತ್ತು. ಕಳೆದ ವರ್ಷದಂದು 75.11% ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರು. ಕಳೆದ ವರ್ಷದ ಫಲಿತಾಂಶಕ್ಕಿಂತ ಈ ಬಾರಿ ಎಲ್ಲದರಲ್ಲೂ ಕಡಿಮೆ ಬಂದಿದೆ. ಒಟ್ಟು 625 ಅಂಕದ ಪರೀಕ್ಷೆಯಲ್ಲಿ ಬೆಂಗಳೂರು, ಬಾಗಲಕೋಟೆ ಮತ್ತು ಪುತ್ತೂರಿನ ಮೂರು ವಿದ್ಯಾರ್ಥಿಗಳು ನೂರು ಪ್ರತಿಶತ ಅಂಕ ಪಡೆದುಕೊಂಡಿದ್ದಾರೆ.

ಕಳೆದ 10 ವರ್ಷಗಳ ಫಲಿತಾಂಶ
2017: 67.87%
2016: 75.11
2015: 81.82
2014: 81.20
2013: 77.47
2012: 76.13
2011: 73.90
2010: 66.81
2009: 70.22
2008: 66.37%

ಶೇ.100 ಅಂಕ ಪಡೆದ ವಿದ್ಯಾರ್ಥಿಗಳು
1) ಪ್ರಥಮ ಭಾಷೆ ವಿಷಯ: 3,232 ವಿದ್ಯಾರ್ಥಿಗಳು
2) ದ್ವಿತೀಯ ಭಾಷೆ: 2371
3) ತೃತೀಯ ಭಾಷೆ: 9757
4) ಗಣಿತ: 1458
5) ವಿಜ್ಞಾನ: 491
6) ಸಮಾಜವಿಜ್ಞಾನ: 2953

20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಬಾರಿ ಒಂದಿಲ್ಲೊಂದು ವಿಷಯದಲ್ಲಿ ಶೇ.100 ಅಂಕ ಪಡೆದಿದ್ದಾರೆ. ಈ ವಿಚಾರದಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಇದರ ಪ್ರಮಾಣದಲ್ಲಿ ಸುಮಾರು 3 ಸಾವಿರದಷ್ಟು ಏರಿಕೆಯಾಗಿದೆ.

ಇನ್ನು, ಶಾಲೆಯ ವಿಚಾರಕ್ಕೆ ಬಂದರೆ 924 ಶಾಲೆಗಳು ನೂರು ಪ್ರತಿಶತದಷ್ಟು ಫಲಿತಾಂಶ ಪಡೆದಿವೆ. 60 ಶಾಲೆಗಳು ಶೂನ್ಯ ಸಂಪಾದನೆ ಮಾಡಿವೆ. ಕಳೆದ ವರ್ಷ 1,560 ಶಾಲೆಗಳು ಶೇ.100, ಹಾಗೂ 60 ಶಾಲೆಗಳು ಸೊನ್ನೆ ಫಲಿತಾಂಶ ಪಡೆದಿದ್ದವು.

625 ಅಂಕ ಪಡೆದ ವಿದ್ಯಾರ್ಥಿಗಳು:
ಒಟ್ಟು ಮೂರು ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲಿ ನೂರು ಪ್ರತಿಶತಕ ಅಂಕ ಪಡೆದಿದ್ದಾರೆ. ಇದರಲ್ಲಿ ಒಬ್ಬ ವಿದ್ಯಾರ್ಥಿನಿಯೂ ಒಳಗೊಂಡಿದ್ದಾರೆ.

1) ಸುಮಂತ್ ಹೆಗಡೆ
ಶಾಲೆ: ಎಂಇಎಸ್ ಕಿಶೋರ್ ಕೇಂದ್ರ, ಮಲ್ಲೇಶ್ವರಂ, ಬೆಂಗಳೂರು

2) ಪೂರ್ಣಾನಂದ
ಶಾಲೆ: ಸೇಂಟ್ ಜೋಚಿಮ್ಸ್ ಹೈಸ್ಕೂಲು, ಪುತ್ತೂರು, ದ.ಕನ್ನಡ

3) ಪಲ್ಲವಿ
ಶಾಲೆ: ಎಸ್'ಆರ್'ಎ ಕಾಂಪೊಸಿಟ್ ಜೂನಿಯರ್ ಕಾಲೇಜು, ಜಮಖಂಡಿ, ಬಾಗಲಕೋಟೆ