Asianet Suvarna News Asianet Suvarna News

ಡಿ ಗ್ರೂಪ್‌ ಕೆಲಸಕ್ಕಿನ್ನು ಎಸ್ಸೆಸ್ಸೆಲ್ಸಿ ಪಾಸಾಗಿರಬೇಕು!

ಡಿ ಗ್ರೂಪ್‌ ಹುದ್ದೆಗಳ ನೇಮಕಾತಿಗೆ ಕನಿಷ್ಠ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿರಬೇಕೆಂದು ಕರ್ನಾಟಕ ಸರ್ಕಾರ ನಿಯಮ ರೂಪಿಸಿದೆ. 

SSLC Mandatory For D Group Employees
Author
Bengaluru, First Published Jul 3, 2019, 9:44 AM IST

ಬೆಂಗಳೂರು [ಜು.3] :  ರಾಜ್ಯದಲ್ಲಿ ಇನ್ನುಮುಂದೆ ಡಿ ಗ್ರೂಪ್‌ ಹುದ್ದೆಗಳ ನೇಮಕಾತಿಗೆ ಕನಿಷ್ಠ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿರಬೇಕು. ಈ ಕುರಿತು ಸೋಮವಾರ ಸರ್ಕಾರದ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಈವರೆಗೆ ಡಿ ಗ್ರೂಪ್‌ ಹುದ್ದೆಗಳ ನೇಮಕಾತಿಗೆ ಕನಿಷ್ಠ ಏಳನೇ ತರಗತಿವರೆಗೆ ವಿದ್ಯಾರ್ಹತೆ ನಿಗದಿಪಡಿಸಲಾಗಿತ್ತು. 

ಬದಲಾದ ಪರಿಸ್ಥಿತಿಯಲ್ಲಿ ಈ ವಿದ್ಯಾರ್ಹತೆಯನ್ನು ಎಸ್‌ಎಸ್‌ಎಲ್‌ಸಿಗೆ ಹೆಚ್ಚಿಸಬೇಕೆಂದು ಅನೇಕ ವರ್ಷಗಳಿಂದ ನಾನಾ ವಲಯಗಳಿಂದ ಒತ್ತಾಯ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಳೆದ ಮೇ ತಿಂಗಳಲ್ಲಿ ಕರಡು ನಿಯಮ ರಚಿಸಿ ಸಂಬಂಧಪಟ್ಟವರಿಂದ ಆಕ್ಷೇಪ ಮತ್ತು ಸಲಹೆಗಳನ್ನು ತಿಳಿಸುವಂತೆ ಕೋರಿತ್ತು. ಆದರೆ ‘ಕರ್ನಾಟಕ ನಾಗರಿಕ ಸೇವೆ (ಸಾಮಾನ್ಯ ನೇಮಕಾತಿ) (ತಿದ್ದುಪಡಿ) ನಿಯಮ 2019’ಕ್ಕೆ ಸಾರ್ವಜನಿಕರಿಂದ ಯಾವುದೇ ಆಕ್ಷೇಪ ಮತ್ತು ಸಲಹೆಗಳು ಬಾರದ ಹಿನ್ನೆಲೆಯಲ್ಲಿ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ.

ಸಿ ಗ್ರೂಪ್‌ಗೆ ಸಂದರ್ಶನ ಇಲ್ಲ:  ಹೊಸ ನಿಯಮದ ಅನ್ವಯ ಡಿ ಗ್ರೂಪ್‌ ಸೇವೆ ಅಥವಾ ಹುದ್ದೆಗಳ ನೇಮಕಾತಿಗೆ ಕನಿಷ್ಠ ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಇದರ ಜೊತೆಗೆ ರಾಜ್ಯ ನಾಗರಿಕ ಸೇವೆಗಳಲ್ಲಿ ಸಿ ಗ್ರೂಪ್‌ ಹುದ್ದೆಗಳಿಗೆ ನೇರ ನೇಮಕಾತಿ ವೇಳೆ ಮೌಖಿಕ ಅಥವಾ ವ್ಯಕ್ತಿತ್ವ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. 

ಹುದ್ದೆ ಕಾಯಮಾತಿ ಇಲ್ಲವೆ ಬಡ್ತಿ ಸಂಬಂಧ ಯಾವುದೇ ವ್ಯಕ್ತಿಗೆ ನಿಗದಿಪಡಿಸಿದ ತರಬೇತಿ ಅವಧಿಯನ್ನು ಕಡಿಮೆ ಮಾಡಿ ಅಥವಾ ತರಬೇತಿ ಅವಧಿಯನ್ನೇ ರದ್ದು ಮಾಡುವಂತಿಲ್ಲ. ಯಶಸ್ವಿಯಾಗಿ ತರಬೇತಿ ಅವಧಿ ಪೂರ್ಣಗೊಳಿಸಿದ ನಂತರವೇ ಮುಂದಿನ ಪ್ರಕ್ರಿಯೆ ನಡೆಸಬೇಕು ಎಂದು ಹೊಸ ನಿಯಮದಲ್ಲಿ ತಿಳಿಸಲಾಗಿದೆ.

Follow Us:
Download App:
  • android
  • ios