ಕೊಲಂಬೋ[ಸೆ.27]: ಸಾಮಾನ್ಯವಾಗಿ ಗಣ್ಯ ವ್ಯಕ್ತಿಗಳಿಗೆ ಸುರಕ್ಷತೆಯ ದೃಷ್ಟಿಯಿಂದ ಭದ್ರತೆ ಕಲ್ಪಿಸಲಾಗುತ್ತದೆ. ಆದರೆ, ಶ್ರೀಲಂಕಾದಲ್ಲಿ ಆನೆಯೊಂದನ್ನು ಭದ್ರತಾ ಸಿಬ್ಬಂದಿ ದಿನದ 24 ಗಂಟೆಯೂ ಕಾವಲು ಕಾಯುತ್ತಾರೆ. ನಾಡುಂಗಮುವಾ ರಾಜ ಹೆಸರಿನ 65 ವರ್ಷದ ಈ ಆನೆ 10.5 ಅಡಿ ಎತ್ತರವಿದ್ದು, ಶ್ರೀಲಂಕಾದಲ್ಲಿ ಪಳಗಿಸಿದ ಆನೆಗಳ ಪೈಕಿ ಅತ್ಯಂತ ಎತ್ತರದ ಆನೆ ಎನಿಸಿಕೊಂಡಿದೆ.

ಛೀ... ಆಗಲ್ಲ ಅಂದ್ರು ಪರೇಡ್ ಗೆ ಕಳಿಸಿ ನನ್ನ ಕೊಂದ್ರಾ ದುರುಳರಾ.. ಇದು ಆನೆ ಕಣ್ಣೀರ ಕತೆ

ಶ್ರೀಲಂಕಾದಲ್ಲಿ ನಡೆಯುವ ಪ್ರಮುಖ ಉತ್ಸವಗಳಲ್ಲಿ ಈ ಆನೆ ಮುಖ್ಯ ಆಕರ್ಷಣೆಯಾಗಿದ್ದು, ರಸ್ತೆಯಲ್ಲಿ ನಡೆದಾಡುವಾಗ ಸರ್ಕಾರ ಶಸ್ತ್ರಸಜ್ಜಿತ ಸೇನಾ ಸಿಬ್ಬಂದಿಗಳನ್ನು ಕಾವಲಿಗೆ ನಿಯೋಜಿಸುತ್ತದೆ. ಅಲ್ಲದೇ ಆನೆ ಸಾಗುವ ಮಾರ್ಗವನ್ನು ತೆರವುಗೊಳಿಸಲು ಇನ್ನೊಂದು ಸೇನಾ ತಂಡವನ್ನು ಕಳುಹಿಸುತ್ತದೆ. 2015ರಲ್ಲಿ ಬೈಕ್‌ ಸವಾರನೊಬ್ಬ ಆನೆಗೆ ತೀರಾ ಸಮೀಪದಿಂದ ಗುದ್ದಿದ್ದ. ಆ ಘಟನೆಯ ಬಳಿಕ ಸರ್ಕಾರ ಆನೆಗೆ ಭದ್ರತೆ ಕಲ್ಪಿಸುತ್ತಿದೆ.

ಬಡಕಲು ಆನೆ ಬಳಸಿ ಶ್ರೀಲಂಕಾದಲ್ಲಿ ಪರೇಡ್!

ಶ್ರೀಲಂಕಾದಲ್ಲಿ ಪ್ರತಿ ವರ್ಷ ನಡೆಯುವ ಪವಿತ್ರ ಬೌದ್ಧ ಉತ್ಸವದ ವೇಳೆ ಮೆರವಣಿಗೆಯಲ್ಲಿ ಭಾಗವಹಿಸುವ ಕೆಲವೇ ಕೆಲವು ಆನೆಗಳ ಪೈಕಿ ನಾಡುಂಗಮುವಾ ರಾಜ ಆನೆ ಕೂಡ ಒಂದು. ಹೀಗಾಗಿ ಈ ಆನೆ ದೇಶದ ಆಸ್ತಿ ಎಂದೇ ಖ್ಯಾತಿಗಳಿಸಿದೆ. ನಾಡುಂಗಮುವಾ ಆನೆಯು 90 ಕಿ.ಮೀ. ನಡೆದು ಕ್ಯಾಂಡಿ ನಗರದಲ್ಲಿ ನಡೆಯುವ ಉತ್ಸವದಲ್ಲಿ ಪಾಲ್ಗೊಳ್ಳುತ್ತದೆ. ಪ್ರತಿ ದಿನ ಸುಮಾರು 25 ರಿಂದ 30 ಕಿ.ಮೀ.ಯಷ್ಟುನಡೆಯುತ್ತದೆ.