ಕೆಂಗಣ್ಣಿಗೆ ಗುರಿಯಾಗಿರುವ ಪ್ರಧಾನಿ ಮೋದಿಗೆ, ಮುಂಬರುವ ವರ್ಷದಲ್ಲಿ ಕಂಟಕವಿದೆ ಎಂದು ಧಾರ್ಮಿಕ ಜ್ಯೋತಿಷಿಗಳು ಹೇಳುತ್ತಿದ್ದಾರೆ.
ಹೊಸ ವರ್ಷವನ್ನು ಉಡುಪಿ ಜಿಲ್ಲೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ವಿಶೇಷ ರೀತಿಯಲ್ಲಿ ಸ್ವಾಗತಿಸಿದ್ದಾರೆ. ಕಾಳಧನಿಕರ ಕೆಂಗಣ್ಣಿಗೆ ಗುರಿಯಾಗಿರುವ ಪ್ರಧಾನಿ ಮೋದಿಗೆ, ಮುಂಬರುವ ವರ್ಷದಲ್ಲಿ ಕಂಟಕವಿದೆ ಎಂದು ಧಾರ್ಮಿಕ ಜ್ಯೋತಿಷಿಗಳು ಹೇಳುತ್ತಿದ್ದಾರೆ. ಹಾಗಾಗಿ ಕೊಲ್ಲೂರು ಕ್ಷೇತ್ರದಲ್ಲಿ ನವ ಚಂಡಿಕಾಯಾಗ ನಡೆಸಿದರು. ಮುಕಾಂಬಿಕೆಯ ಸನ್ನಿಧಿಯಲ್ಲಿ ನಡೆಯುವ ಚಂಡಿಕಾಯಾಗಕ್ಕೆ ವಿಶೇಷ ಮಹತ್ವ ಇದೆ. ಜಡ್ಕಲ್'ನಿಂದ ಪಾದಯಾತ್ರೆಯ ಮೂಲಕ ಕೊಲ್ಲೂರಿಗೆ ಬಂದ ಕಾರ್ಯಕರ್ತರು, ಪೂರ್ಣಾಹುತಿಯಲ್ಲಿ ಭಾಗಿಯಾದರು. ಸ್ಥಳೀಯ ಮುಖಂಡ ಹಾಗೂ ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ಸುಕುಮಾರ ಶೆಟ್ಟಿ ಯಾಗದ ನೇತೃತ್ವ ವಹಿಸಿದ್ದರು. ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿಯವ್ರು ಮುಕಾಂಬಿಕಾ ಕ್ಷೇತ್ರಕ್ಕೆ ಬರುವಂತಾಗಲಿ ಎಂದು ಆಶಿಸಿದರು
